ನ್ಯೂಸ್ ನಾಟೌಟ್: ಬಹುತೇಕ ಪ್ರಕರಣಗಳು ಹದಿ ಹರೆಯದ ಮಕ್ಕಳು ಹೆತ್ತವರ ವಾಹನವನ್ನು ರಸ್ತೆಯಲ್ಲಿ ಓಡಿಸಿ ಪೊಲೀಸರಿಗೆ ಸಿಕ್ಕಿ ಬೀಳುವ ಪ್ರಕರಣಗಳು ನಡೆಯುತ್ತಿರುತ್ತವೆ. ಆದರೆ, ಈ ಘಟನೆಯಲ್ಲಿ ಮಕ್ಕಳು ಅಮ್ಮನ ಮೇಲಿನ ಕೋಪಕ್ಕೆ ಕಾರನ್ನೇ ಓಡಿಸಿಕೊಂಡು 300 ಕಿಲೋ ಮೀಟರ್ ದೂರ ಸಾಗಿದ ಘಟನೆಯೊಂದು ಬೆಳಕಿಗೆ ಬಂದಿದೆ.
11 ವರ್ಷದ ಅಕ್ಕ ಹಾಗೂ 10 ವರ್ಷದ ತಮ್ಮನನ್ನು ಪೊಲೀಸರು ಅಡ್ಡಗಟ್ಟಿ ಹಿಡಿದು ಪೋಷಕರ ಮೇಲೆ ಪ್ರಕರಣ ದಾಖಲಿಸಿ ಮನೆಗೆ ವಾಪಸ್ ಕಳುಹಿಸಿದ ಅಮೆರಿಕದ ಉತ್ತರ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ.
ಅಸಮಾಧಾನಗೊಂಡ ಇಬ್ಬರು ಮಕ್ಕಳು ತಮ್ಮ ತಾಯಿಯ ಕಾರನ್ನು ತೆಗೆದುಕೊಂಡು ಗಂಟೆಗಳ ಕಾಲ ಓಡಿಸಲು ನಿರ್ಧರಿಸಿದ್ದರು. ಮನೆಯಲ್ಲಿ ಗಲಾಟೆ ಮಾಡಿಕೊಂಡ ಮಕ್ಕಳು ಮನೆ ತೊರೆಯಲು ನಿರ್ಧರಿಸಿದ್ದರು.
ಉತ್ತರ ಫ್ಲೋರಿಡಾದ ಪೊಲೀಸರು ಗುರುವಾರ ಮುಂಜಾನೆ 3: 50 ರ ಸುಮಾರಿಗೆ ಅಲಚುವಾದಲ್ಲಿ ಮಕ್ಕಳಿಬ್ಬರು ವಾಹನ ಚಾಲನೆ ಮಾಡುತ್ತಿರುವುದನ್ನು ಗಮನಿಸಿ ಅವರನ್ನು ಬೆನ್ನಟ್ಟಿದ್ದಾರೆ. 10 ವರ್ಷದ ಬಾಲಕ ಮತ್ತು ಅವನ 11 ವರ್ಷದ ಸಹೋದರಿಯನ್ನು ತಡೆದಿದ್ದಾರೆ. ಅದಕ್ಕಿಂತ ಮೊದಲು ಮಕ್ಕಳ ತಾಯಿ ಪೊಲೀಸರಿಗೆ ಅವರಿಬ್ಬರೂ ಪರಾರಿಯಾಗಿರುವ ದೂರು ನೀಡಿದ್ದರು. 10 ವರ್ಷದ ಬಾಲಕ ಕಾರನ್ನು ಓಡಿಸಿದ್ದರೆ ಆತನ ಸಹೋದರೆ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದಳು ಎಂದು ಪೊಲೀಸರ ತಿಳಿಸಿದ್ದಾರೆ.
ಇಬ್ಬರೂ ಮಕ್ಕಳು ಅತಿಯಾದ ಮೊಬೈಲ್ ಗೀಳಿಗೆ ಬಿದಿದ್ದರು. ಹೀಗಾಗಿ ತಾಯಿ ಹೊರಗೆ ಹೋಗುವಾಗ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದುಕೊಂಡು ಹೋಗಿದ್ದರು. ಇದಕ್ಕೆ ಕೋಪಗೊಂಡ ಅಕ್ಕ , ತಮ್ಮ ಅಮ್ಮನ ಕಾರನ್ನು ತೆಗೆದುಕೊಂಡು ಹೋಗಿರುವುದಾಗಿ ವರದಿ ತಿಳಿಸಿದೆ.