ನ್ಯೂಸ್ ನಾಟೌಟ್: ಖಾಸಗಿ ಕ್ಲಿನಿಕ್ನಲ್ಲಿ (Clinic) ವೈದ್ಯ ಹವಾನಿಯಂತ್ರಣವನ್ನು (AC) ರಾತ್ರಿಯಿಡೀ ಆನ್ ಮಾಡಿ ಮಲಗಿದ ಪರಿಣಾಮ ಎರಡು ನವಜಾತ ಶಿಶುಗಳು ದುರಂತ ಅಂತ್ಯ ಕಂಡ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.
ಕ್ಲಿನಿಕ್ ನ ಮಾಲೀಕ ಡಾಕ್ಟರ್ ನೀತು ಎಂಬವರು, ಚೆನ್ನಾಗಿ ನಿದ್ದೆ ಮಾಡುವ ಸಲುವಾಗಿ ಹವಾನಿಯಂತ್ರಣ (ಎಸಿ) ಆನ್ ಮಾಡಿದ್ದಾನೆ. ತಂಪು ವಾತಾವರಣದಿಂದಾಗಿ ಎರಡು ನವಜಾತ ಶಿಶುಗಳು ನಿಗೂಢವಾಗಿ ಕೊನೆಯುಸಿರೆಳಿದಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೊನೆಯುಸಿರೆಳೆದ ಶಿಶುಗಳ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದು, ವೈದ್ಯನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ವೈದ್ಯನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದು, ವೈದ್ಯರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ನವಜಾತ ಶಿಶುಗಳು ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಜನಿಸಿದ್ದು, ಅದೇ ದಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಕ್ಕಳನ್ನು ಚಿಕಿತ್ಸೆಗೆಂದು ಫೋಟೋಥೆರಪಿ ಘಟಕದಲ್ಲಿ ಇರಿಸಲಾಗಿತ್ತು. ಈ ವೇಳೆ ವೈದ್ಯ ಮಲಗಲೆಂದು ಎಸಿ ಆನ್ ಮಾಡಿದ್ದು, ಮರುದಿನ ಬೆಳಗ್ಗೆ ಕುಟುಂಬಸ್ಥರು ಮಕ್ಕಳನ್ನು ನೋಡಲೆಂದು ಹೋದಾಗ ಎರಡೂ ಶಿಶುಗಳು ಉಸಿರು ನಿಲ್ಲಿಸಿದ್ದದ್ದು ಪತ್ತೆಯಾಗಿದೆ.