ನ್ಯೂಸ್ ನಾಟೌಟ್: ಓಣಂ ಬಂಪರ್ ಲಾಟರಿಯ ಫಲಿತಾಂಶವನ್ನು (ಸೆ.22) ಘೋಷಣೆ ಮಾಡಲಾಯಿತು. ಈ ಬಾರಿ 75 ಲಕ್ಷಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್ ಖರೀದಿ ಮಾಡಿದರು. ತಮಿಳುನಾಡಿ ನಾಲ್ವರು ಯುವಕರು ಮೊದಲ ಬಹುಮಾನವನ್ನು ಪಡೆದಿದ್ದಾರೆ.
ಒಂದು ಟಿಕೆಟ್ಗೆ 500 ರೂ. ಪಾವತಿಸಿ ಏನನ್ನೂ ಪಡೆಯದ ಹಿನ್ನೆಲೆಯಲ್ಲಿ ಅನೇಕರಿಗೆ ನಿರಾಸೆಯೂ ಆಗಿದೆ. ಆದರೆ, ಪಟ್ಟಣಂತಿಟ್ಟ ಮೂಲದ ರಾಜನ್ ಮಾತ್ರ ಈ ಲಾಟರಿ ಟಿಕೆಟ್ ಖರೀದಿಯಲ್ಲಿ ವಿಭಿನ್ನ ಹಿನ್ನೆಲೆ ಹೊಂದಿದ್ದಾರೆ.
ರಾಜನ್ ನಿವೃತ್ತ ಸರ್ಕಾರಿ ನೌಕರರಾಗಿದ್ದು, ಕಳೆದ 55 ವರ್ಷಗಳಿಂದ ಲಾಟರಿ ಖರೀದಿ ಮಾಡುತ್ತಿದ್ದಾರೆ. ಲಾಟರಿ ಟಿಕೆಟ್ಗಾಗಿಯೇ ಈವರೆಗೆ 12 ಲಕ್ಷ ರೂಪಾಯಿಯನ್ನು ವ್ಯಯಿಸಿದ್ದಾರೆ ಎನ್ನಲಾಗಿದೆ. ಐದು ದಶಕಗಳಿಗೂ ಹೆಚ್ಚು ಕಾಲ ಲಾಟರಿ ಖರೀದಿ ಮಾಡಿದ ರಾಜನ್ ಮೊದಲ ಬಾರಿ ಕೇವಲ 500 ರೂಪಾಯಿ ಗೆದ್ದಿದ್ದಾರೆ ಎನ್ನುವುದು ಶಾಕಿಂಗ್ ವಿಷಯ.
ಕೇವಲ 500 ರೂ. ಬಂದರೂ ಬೇಸರಿಸಿಕೊಳ್ಳದ ರಾಜನ್, ಲಾಟರಿ ಟಿಕೆಟ್ಗಳ ಖರೀದಿಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ನನ್ನ ಕೈಯಲ್ಲಿ ಸಾಧ್ಯವಾಗುವಷ್ಟ ದಿನ ಲಾಟರಿ ಖರೀದಿ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಒಮ್ಮೆಯೂ ಬಹುಮಾನ ಬಂದಿರಲಿಲ್ಲ. ಮೊದಲ ಬಾರಿಗೆ ಬಹುಮಾನ ಬಂದಿದೆ. ಆದರೆ, ಕೇವಲ 500 ರೂಪಾಯಿ.