ನ್ಯೂಸ್ ನಾಟೌಟ್ : ಸರ್ಕಾರದ ಆದೇಶದಂತೆ NDRF (National Disaster Response Force -ರಾಷ್ಟ್ರೀಯ ತುರ್ತು ನಿರ್ವಾಹಣಾ ಪಡೆ) ಯ ತಂಡ ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದರು.
ಪ್ರಕೃತಿ ವಿಕೋಪಗಳಾದ ಪ್ರವಾಹ, ಭೂಕಂಪ ಹಾಗೂ ಅಪಘಾತ, ಹೃದಯಾಘಾತ ಮತ್ತು ಹಾವು ಕಚ್ಚಿದಂತಹ ತುರ್ತು ಸಂದರ್ಭಗಳಲ್ಲಿ ನಾವು ಕೈಗೊಳ್ಳಬಹುದಾದ ಪ್ರಥಮ ಚಿಕಿತ್ಸೆಯ ಕ್ರಮಗಳ ಬಗ್ಗೆ ಉತ್ತಮ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೊಡಗು NDRF ತಂಡದ Inspector ಶಾಂತಿಲಾಲ್ ಜಾತಿಯಾರವರು ಹಾಗೂ ಅವರ ತಂಡದವರು ತರಬೇತಿ ನೀಡಿ ಉತ್ತಮ ಸಲಹೆ ಸೂಚನೆಗಳನ್ನಿತ್ತರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಲೋಕ್ಯಾನಾಯ್ಕ ಬಿ. ಹಾಗೂ ಮುಖ್ಯ ಶಿಕ್ಷಕರಾದ ಶ್ರೀ ಐತ್ತಪ್ಪ ಎ. ಎಲ್ಲಾ ಬೋಧಕ-ಬೋಧಕೇತ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.