ನ್ಯೂಸ್ ನಾಟೌಟ್ : ಅಕ್ಕ-ತಂಗಿಯ ಬಾಂಡಿಂಗ್ ಬಗ್ಗೆ ತಿಳಿದವರಿಗೇ ಗೊತ್ತು.ಚಿಕ್ಕಂದಿನಲ್ಲಿ ಜಗಳ-ತುಂಟಾಟ-ಅಟ-ಪಾಠ, ನೋವು-ನಲಿವುಗಳಲ್ಲಿ ಕಾಲ ಕಳೆದರೂ ,ದೊಡ್ಡವರಾಗುತ್ತಿದ್ದಂತೆ ಆ ಸಂಬಂಧ ಇನ್ನೂ ಗಟ್ಟಿಯಾಗುತ್ತೆ.ಕಷ್ಟ-ಸುಖವನ್ನು ಹಂಚಿಕೊಳ್ಳಲು ಅಕ್ಕನಿಗೆ ತಂಗಿ ಇದ್ದರೆ ಸಂತೋಷ.ತಂಗಿಗೆ ಅಕ್ಕನೇ ಸರ್ವಸ್ವ. ಇಂತಹ ಅಪರೂಪದ ಭಾವಾನಾತ್ಮಕ ಸಂಬಂಧ ಬೆಸೆದುಕೊಂಡ ಅಕ್ಕ-ತಂಗಿಯರು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಕಷ್ಟ-ಸುಖಗಳನ್ನು ವಿಚಾರಿಸುತ್ತಿರುತ್ತಾರೆ.
ಇಂತಹ ಪವಿತ್ರ ಸಂಬಂಧಕ್ಕೆ ಬೆಲೆ ಕಟ್ಟಲಸಾಧ್ಯ.ಅದರೆ ಸದ್ಯ ಈ ಒಂದು ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.ಅದಕ್ಕೆ ಕಾರಣ ಮದುವೆ.ಅರೇ .. ಇದೇಕೆ ಅಂತೀರಾ.. ಹೌದು, ನಿಮ್ಗೆಲ್ಲಾ ಗೊತ್ತಿದೆ. ಬಾಲಿವುಡ್ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಅವರ ಬಗ್ಗೆ .ಇದೀಗ ಅವರ ತಂಗಿ ಪರಿಣಿತಿ ಚೋಪ್ರಾ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ನಟಿ ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆಗೆ ಸಿದ್ಧತೆಗಳು ಆರಂಭವಾಗಿದೆ. ಎರಡೂ ಕುಟುಂಬಗಳು ಉದಯಪುರಕ್ಕೆ ತೆರಳಿವೆ. ಅಲ್ಲಿ ನವ ಜೋಡಿ ಸಪ್ತಪದಿ ತುಳಿಯಲಿದ್ದಾರೆ. ಈ ಮದುವೆಗೆ ರಾಜಕೀಯ ಮತ್ತು ಬಾಲಿವುಡ್ನ ಹಲವು ತಾರೆಯರು ಆಗಮಿಸಲಿದ್ದಾರೆ. ಆದರೆ, ಪ್ರೀತಿಯ ಅಕ್ಕ ಪ್ರಿಯಾಂಕಾ ಚೋಪ್ರಾ ಮದುವೆಗೆ ಹಾಜರಾಗುವುದಿಲ್ಲ ಎಂಬ ವರದಿಗಳಿವೆ. ಈ ಊಹಾಪೋಹಗಳ ನಡುವೆ, ‘ದೇಸಿ ಹುಡುಗಿ’ ತನ್ನ ಸಹೋದರಿಗಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಸೆ.24 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಅತಿಥಿಗಳು ತೆರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ಚಾಡಾ ಮತ್ತು ಚೋಪ್ರಾ ಕುಟುಂಬದ ಕೆಲವು ವಿಡಿಯೋಗಳು ಹೊರಬಿದ್ದಿವೆ. ಮದುವೆಯ ವಿಚಾರದಲ್ಲಿ ಎಲ್ಲರ ಮುಖದಲ್ಲೂ ಬೇರೆಯದೇ ರೀತಿಯ ಖುಷಿ ಕಾಣುತ್ತಿದೆ. ಇಡೀ ಕುಟುಂಬ ಒಟ್ಟಿಗೆ ಕಾಣಿಸಿಕೊಂಡಾಗ, ಪ್ರಿಯಾಂಕಾ ಅವರ ಅನುಪಸ್ಥಿತಿಯು ಮದುವೆಗೆ ಹಾಜರಾಗದಿರುವ ಬಗ್ಗೆ ಚರ್ಚೆಗೆ ಕಾರಣವಾಯಿತು. ಏತನ್ಮಧ್ಯೆ, ಪ್ರಿಯಾಂಕಾ ಅವರು ಪರಿಣೀತಿ ಅವರ ಹೊಸ ಆರಂಭಕ್ಕಾಗಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಇದು ಅವರು ಮದುವೆಗೆ ಹಾಜರಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ.
ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಗಾಯಕ ನಿಕ್ ಜೋನಸ್ ಜೊತೆ ಮದುವೆ ಆದ ಬಳಿಕ ಅವರು ಬಾಲಿವುಡ್ ಜೊತೆ ಹೆಚ್ಚು ನಂಟು ಹೊಂದಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವರು ಭಾರತಕ್ಕೆ ಬರುತ್ತಾರೆ. ಹಿಂದಿ ಸಿನಿಮಾಗಳನ್ನು ಕೂಡ ಅವರೀಗ ಒಪ್ಪಿಕೊಳ್ಳುತ್ತಿಲ್ಲ. ಈಗಾಗಲೇ ಒಪ್ಪಿಕೊಂಡ ಕೆಲಸಗಳನ್ನು ಬಿಟ್ಟುಬರಲು ಅವರಿಗೆ ಮದುವೆಗೆ ಸಾಧ್ಯವಾಗುತ್ತಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.ಪರಿಣೀತಿ ಚೋಪ್ರಾ ಅವರ ಹಳೆಯ ಫೋಟೋವನ್ನು ಹಂಚಿಕೊಂಡಿರುವ ಪ್ರಿಯಾಂಕಾ, “ನಿಮ್ಮ ಜೀವನದ ಅತಿದೊಡ್ಡ ದಿನದಂದು ತುಂಬಾ ಸಂತೋಷವಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ಹೊಸ ಆರಂಭ” ಎಂದು ಬರೆದಿದ್ದಾರೆ.
ಲೀಲಾ ಪ್ಯಾಲೇಸ್ನಲ್ಲಿರುವ ಅತ್ಯಂತ ದುಬಾರಿ ಸೂಟ್ ಡ್ಯುಪ್ಲೆಕ್ಸ್ ಸೂಟ್ ಆಗಿದೆ. ಇದೇ ಸ್ಥಳದಲ್ಲಿ ಪರಿಣೀತಿ ಅವರ ಚೂರ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಒಂದು ದಿನದ ತಂಗುವ ದರ ಸುಮಾರು 9 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.