ನ್ಯೂಸ್ ನಾಟೌಟ್: ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ವಾಹನ ಚಲಾಯಿಸಬೇಕು. ಪ್ರತಿ ಜೀವ ಮತ್ತು ಜೀವನ ಅಮೂಲ್ಯ. ಆದ್ದರಿಂದ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಳ್ಳಬೇಕು ಎಂದು ಸುಳ್ಯ ಪೊಲೀಸ್ ಉಪನಿರೀಕ್ಷಕ ಈರಯ್ಯ ದೂಂತೂರು ಹೇಳಿದರು.
ಸುಳ್ಯ ನಗರದಲ್ಲಿ ರೋಟರಿ ಕ್ಲಬ್, ರೋಟರಿ ಕ್ಲಬ್ ಸುಳ್ಯ ಸಿಟಿ ಮತ್ತು ಇಂಟರಾಕ್ಟ್ ಕ್ಲಬ್ ವತಿಯಿಂದ ಆಯೋಜಿಸಿದ ರಸ್ತೆ ಸುರಕ್ಷತಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ರಸ್ತೆ ಸುರಕ್ಷತಾ ಮೊದಲಾದ ಜಾಗೃತಿ ಕಾರ್ಯಕ್ರಮಗಳನ್ನು ಮಕ್ಕಳಿಗೆ ಎಳವೆಯಲ್ಲೇ ತಿಳಿಸಿಕೊಡಬೇಕು. ಇತ್ತೀಚೆಗೆ ಯುವಜನತೆಯ ನಿರ್ಲಕ್ಷ್ಯದ ವಾಹನ ಚಾಲನೆಯಿಂದ ಎಷ್ಟೋ ಅಮೂಲ್ಯ ಜೀವಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈ ಬಗ್ಗೆ ಯುವಜನತೆಗೆ ತಿಳಿ ಹೇಳುವ ಕೆಲಸವಾಗಬೇಕಿದೆ. ಜಾಗೃತಿ ಜಾಥಾ ಆಯೋಜಿಸಿದ ರೋಟರಿ ಸಂಸ್ಥೆಯ ಎಲ್ಲಾ ಸಂಘಟಕರ ಶ್ರಮ ಸಾರ್ಥಕವಾಗಿದೆ ಎಂದರು.
ಜನ ಜಾಗೃತಿ ಜಾಥಾ ಸುಳ್ಯದ ಜ್ಯೋತಿ ವೃತ್ತದಿಂದ ಪ್ರಾರಂಭಗೊಂಡು ಸುಳ್ಯ ಗಾಂಧಿನಗರವರೆಗೆ ಸಾಗಿತು. ಕಾರ್ಯಕ್ರಮ ಜಾಥಾದಲ್ಲಿ ರೋಟರಿ ಶಾಲಾಮಕ್ಕಳು ಹಾಗೂ ಶಿಕ್ಷಕ ವೃಂದ ಪಾಲ್ಗೊಂಡು ಕರಪತ್ರ ಹಂಚಿ ಜನರಲ್ಲಿ ಜಾಗೃತಿ ಮೂಡಿಸಿದರು.
ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ವಿಕ್ರಂದತ್ತ, ಮಾಜಿ ಗವರ್ನರ್ ಡಾ.ದೇವದಾಸ ರೈ, ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಚೇರ್ಮ್ಯಾನ್ ವಿಶ್ವಾಸ್ ಶೆಣೈ, ರೋಟರಿ ಜಿಲ್ಲಾ ರಸ್ತೆ ಸುರಕ್ಷತಾ ಜಾಗೃತಿ ಚೇರ್ಮ್ಯಾನ್ ಹರ್ಷ ಕುಮಾರ್ ರೈ ಉಪಸ್ಥಿತರಿದ್ದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಕಿನ್ನಿಗೋಳಿ ರೋಟರಿ ಕ್ಲಬ್ನ ಶರತ್ ಕಿನ್ನಿಗೋಳಿ, ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷೆ ಲತಾ, ರೋಟರಿ ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಶೇಡಿಕಜೆ, ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಹಿಮಾನಿ, ರೋಟರಿ ಕ್ಲಬ್ ಹಾಗೂ ರೋಟರಿ ಕ್ಲಬ್ ಸುಳ್ಯ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಾದ ಕಸ್ತೂರಿ ಶಂಕರ್, ಡಾ.ಕೇಶವ ಪಿ.ಕೆ ಚಂದ್ರಶೇಖರ ಪೇರಾಲು, ಪ್ರಭಾಕರನ್ ನಾಯರ್, ಅಬ್ದುಲ್ ಹಮೀದ್ ಜನತಾ, ಮುರಳೀಧರ ರೈ, ಗಣೇಶ್ ಭಟ್, ಎಂ.ಮೀನಾಕ್ಷಿ ಗೌಡ, ಅವಿನ್ ರಂಗತ್ತಮಲೆ, ಮಧುರ ಎಂ.ಆರ್, ಯೋಗಿತಾ ಗೋಪಿನಾಥ್, ಪ್ರಮೋದ್ ಕುಮಾರ್ ಕೆ., ಅಶೋಕ್ ಕೊಯಿಂಗೋಡಿ, ಪ್ರೀತಮ್ ಡಿ.ಕೆ. ಶಿವಪ್ರಸಾದ್ ಕೆ.ವಿ., ಗಿರಿಜಾ ಶಂಕರ್, ಪ್ರಭಾಕರನ್ ನಾಯರ್ ಸಿ.ಎಚ್, ಹರಿರಾಯ ಕಾಮತ್, ಶ್ರೀಹರಿ ಪೈಂದೋಡಿ, ಸತೀಶ್ ಕೆ.ಜಿ. ಮತ್ತಿತರರು ಪಾಲ್ಗೊಂಡಿದ್ದರು. ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಗಿರೋಶ್ ನಾರ್ಕೋಡು ವಂದಿಸಿದರು. ಪ್ರೀತಮ್ ಡಿ.ಕೆ.ಕಾರ್ಯಕ್ರಮ ನಿರೂಪಿಸಿದರು.