ನ್ಯೂಸ್ ನಾಟೌಟ್: ದೇವರು ಎಲ್ಲೆಡೆ ಬರಲಾಗುವುದಿಲ್ಲ ಎಂದು ಅಪಾಯದ ಕಾಲದಲ್ಲಿ ಯಾವುದೋ ರೂಪದಲ್ಲಿ ನಮ್ಮ ಮುಂದೆ ಸಹಾಯಕ್ಕೆ ಒದಗುತ್ತಾರೆ. ಇಲ್ಲೊಂದು ಕಡೆ ನಡೆದ ಘಟನೆಯೊಂದು ಮೈ ಜುಮ್ಮೆನಿಸುತ್ತಿದೆ.
ಇದು 2021ರಲ್ಲಿ ಮುಂಬೈನಲ್ಲಿ ನಡೆದ ಘಟನೆ ಆಗಿದ್ದು, ಈ ಘಟನೆಯ ವೀಡಿಯೋ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.
ಅಂಧ ತಾಯಿಯೊಬ್ಬರು ತನ್ನ ಮಗನನ್ನು ಕರೆದುಕೊಂಡು ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ (Railway Platform)ನಡೆಯುತ್ತಾ ಸಾಗುತ್ತಿದ್ದರು. ಅಮ್ಮನಿಗೆ ಕಾಣಿಸದಿದ್ದರು, ಮಗನಿಗೆ ಸ್ಪಷ್ಟವಾಗಿ ಕಣ್ಣು ಕಾಣಿಸುತ್ತಿತ್ತು, ಆ ನಂಬಿಕೆಯಲ್ಲಿ ತಾಯಿ ಆತನನ್ನು ಕರೆದುಕೊಂಡು ಸಾಗುತ್ತಿದ್ದಳು.
ಆದರೆ ಪುಟ್ಟ ಬಾಲಕನಿಗೆ ಹುಡುಗಾಟ ಎಲ್ಲೋ ನೋಡುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಆ ಬಾಲಕ ಫ್ಲಾಟ್ಫಾರ್ಮ್ನ ಬದಿಗೆ ಕಾಲಿಟ್ಟು ದಿಢೀರನ್ನೇ ರೈಲ್ವೆ ಹಳಿ ಮೇಲೆ ಬಿದ್ದು ಬಿಟ್ಟಿದ್ದ, ಈ ವೇಳೆ ಅಂಧ ತಾಯಿ ಏನು ನಡೆಯಿತು ಎಂಬುದನ್ನು ತಿಳಿಯದೆ ಅತ್ತಿತ್ತ ಕೈ ತಡಕಾಡುತ್ತಾ ಪರದಾಡುತ್ತಿದ್ದಳು. ಇತ್ತ ಒಂದು ಮೂಲೆಯಲ್ಲಿ ರೈಲು ಬರುತ್ತಿದ್ದು, ಇನ್ನೇನು ರೈಲು ಬಾಲಕನ ಮೇಲೆ ಹರಿದು ಹೋಗುತ್ತದೆ ಎನ್ನುವಷ್ಟರಲ್ಲಿ ದೇವರಂತೆ ಅಲ್ಲಿಗೆ ಬಂದವರು ಸೆಂಟ್ರಲ್ ರೈಲ್ವೆಯ ಪಾಯಿಂಟ್ ಮ್ಯಾನ್ ಮಯೂರ್ ಶೆಲ್ಕೆ ಎಂಬವರು ಆತನನ್ನು ಕಾಪಾಡಿದ್ದರು.
ಅಂದಹಾಗೆ ಈ ಅಂಧತಾಯಿ ಹೊಟ್ಟೆ ಹೊರೆಯುವುದಕ್ಕಾಗಿ ಬಾಚಾಣಿಕೆ ಹೇರ್ಫಿನ್ ಮುಂತಾದ ವಸ್ತುಗಳನ್ನು ಮಾರುವ ಕೆಲಸ ಮಾಡುತ್ತಿದ್ದರು. ಕಣ್ಣು ಕಾಣದ ಇವರು ಎಲ್ಲೆಡೆ ತನ್ನ ಮಗನನ್ನು ಕರೆದೊಯ್ಯುತ್ತಿದ್ದರು.
ರೈಲು ಬರುತ್ತಿದೆ ಎಂಬುದನ್ನು ನೋಡಿದ ಅವರು ಸ್ವಲ್ಪವೂ ಹಿಂದೂ ಮುಂದೂ ನೋಡದೇ ಹಳಿಗೆ ಹಾರಿ ಬಾಲಕನನ್ನು ಪ್ಲಾಟ್ಫಾರ್ಮ್ ಮೇಲೆ ಅತ್ತಿ ಹಾಕಿ ಅವರು ಕೂಡ ಅಷ್ಟೇ ವೇಗದಲ್ಲಿ ಮೇಲೇರಿದ್ದರು, ಅವರು ಮೇಲೆರುವುದು ರೈಲೊಂದು ಪಾಸಾಗಿ ಹೋಗುವುದು ಕ್ಷಣಗಳಲ್ಲಿ ನಡೆದು ಹೋಯ್ತು. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಮಯೂರ್ ಒಂದೋ ಶಾಶ್ವತವಾಗಿ ಅಂಗವಿಕಲರಾಗಬೇಕಿತ್ತು. ಅಥವಾ ಪ್ರಾಣ ಕಳೆದುಕೊಳ್ಳಬೇಕಿತ್ತು. ಅದರೂ ಅದ್ಯಾವುದರ ಬಗ್ಗೆ ಯೋಚಿಸದೇ ಹಳಿಗೆ ಧುಮುಕಿದ ಮಯೂರ್ ಅಂದು ತಾಯಿ ಮಗನ ಪಾಲಿಗೆ ದೇವರಾಗಿದ್ದರು.
ಮಯೂರ್ ಶೆಲ್ಕೆ ಮಗುವನ್ನು ರಕ್ಷಿಸಿದ ಆ ರೋಚಕ ಕ್ಷಣದ ಸಾಹಸ ದೃಶ್ಯ ಪ್ಲಾಟ್ಫಾರ್ಮ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆ ಆಗಿತ್ತು, ಮಯೂರ್ ಶೆಲ್ಕೆ ಅವರ ಈ ಸಮಯೋಚಿತ ಕಾರ್ಯಕ್ಕೆ ಸೆಂಟ್ರಲ್ ರೈಲ್ವೆ ಅವರಿಗೆ 50 ಸಾವಿರ ಬಹುಮಾನ ನೀಡಿ ಗೌರವಿಸಿತ್ತು. ಆದರೆ ಅಲ್ಲೂ ದೊಡ್ಡತನ ಮೆರೆದ ಮಯೂರ್ ಶೆಲ್ಕೆ ಆ ಹಣವನ್ನು ಬಾಲಕನ ಶಿಕ್ಷಣಕ್ಕಾಗಿ ಆ ಅಂಧ ತಾಯಿಗೆ ನೀಡಿದರು. ಇತ್ತ ಮಯೂರ್ ಶೆಲ್ಕೆ ಈ ವಿಚಾರವನ್ನು ಮನೆಗೆ ಹೇಳಿಯೇ ಇರಲಿಲ್ಲವಂತೆ. ಆದರೆ ಯಾವಾಗ ವೀಡಿಯೋ ವೈರಲ್ ಆಯ್ತೋ ಮನೆಯವರು ಈ ವೀಡಿಯೋ ನೋಡಿ ಮೊದಲಿಗೆ ಗಾಬರಿಯಾಗಿದ್ದಾರೆ ಮತ್ತು ಈಗ ಹೆಮ್ಮೆ ವ್ಯಕ್ತಪಡಿಸಿದ್ದಾರೆ.