ನ್ಯೂಸ್ ನಾಟೌಟ್ : ಹೊಟ್ಟೆ ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾದ ಹುಡುಗನಿಗೆ ಕಾದಿತ್ತು ಅಚ್ಚರಿ.ಈ ಘಟನೆಗೆ ಸ್ವತಃ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ. ಅದೇನದು ಇಲ್ಲಿದೆ ಡಿಟೇಲ್ಸ್..
ಹೌದು, ಹೊಟ್ಟೆ ನೋವು ಅಂತ ಹೇಳಿ ಹುಡುಗನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹುಡುಗನ ಹೊಟ್ಟೆಯಲ್ಲಿ ವೈದ್ಯರು 15 ಸೆಂ.ಮೀ ಉದ್ದದ ಚಾಕು ಪತ್ತೆ ಮಾಡಿದ್ದಾರೆ. ಈ ವಿಚಿತ್ರ ಘಟನೆ ನೇಪಾಳದ ಕಠ್ಮಂಡುವಿನಲ್ಲಿ ನಡೆದಿದೆ.22 ವರ್ಷದ ಹುಡುಗ ಇತ್ತೀಚೆಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ.ಕೂಡಲೇ ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಈ ವೇಳೆ ಮೇಲ್ನೋಟದಿಂದ ವೈದ್ಯರು ಏನೂ ಕಂಡು ಬಂದಿರಲಿಲ್ಲ.ಬಳಿಕ ಎಲ್ಲಾ ರೀತಿಯ ಪರೀಕ್ಷೆಗಳನ್ನು ಕೂಡ ನಡೆಸಿದ್ದಾರೆ.ಆದರೂ ಏನೂ ಕಂಡುಬಂದಿಲ್ಲ.
ಕೊನೆಗೆ ಡಾಕ್ಟರ್ ಗೂ ಕೂಡ ಈ ಪ್ರಕರಣ ತಲೆನೋವಾಗಿ ಪರಿಣಮಿಸಿತು.ಮತ್ತೆ ಸೂಕ್ಷ್ಮವಾಗಿ ಪರೀಕ್ಷಿಸುತ್ತಾ ಹೋದ್ರು. ಹೊಟ್ಟೆನೋವು ಇದ್ದರೂ ವಾಕರಿಕೆಯಂತಹ ಲಕ್ಷಣಗಳು ಕಾಣಿಸಲಿಲ್ಲ.ಇದರ ಪರಿಣಾಮವಾಗಿ ಹೊಟ್ಟೆಯನ್ನು ಪರೀಕ್ಷಿಸಿದಾಗ ಹೊಟ್ಟೆಯ ಬಲಭಾಗಕ್ಕೆ ಹೊಲಿಗೆ ಹಾಕಿರುವುದು ವೈದ್ಯರಿಗೆ ಗೊತ್ತಾಗಿದೆ.ಇದೇನಪ್ಪಾ ಎಂದು ಕೇಳಿದಾಗ ಹಿಂದಿನ ದಿನ ಜಗಳವಾಗಿತ್ತು ಎಂದಿದ್ದಾನೆ. ಆ ವೇಳೆ ದೇಹದ ಈ ಭಾಗ ಗಾಯವಾಯಿತು ಎಂದು ಹುಡುಗ ಹೇಳಿದ್ದಾನೆ.
ಅನುಮಾನ ಬಂದ ವೈದ್ಯರು ಎಕ್ಸ್ ರೇ ತೆಗೆದು ನೋಡಿದಾಗ ಬೆಚ್ಚಿಬೀಳಿಸುವ ದೃಶ್ಯ ಕಂಡುಬಂತು.ವೈದ್ಯರಿಗೆ ಆ ಹುಡುಗನ ಹೊಟ್ಟೆಯಲ್ಲಿ ಚಾಕು ಪತ್ತೆಯಾಗಿದೆ. ಅದು ಕೂಡ 15 ಸೆಂ.ಮೀ ಉದ್ದದ ಚಾಕು ಎಂದರೆ ನೀವು ನಂಬಲೇ ಬೇಕು. ಸ್ವತಃ ಇದನ್ನು ನೋಡಿ ವೈದ್ಯರೇ ಬೆರಗಾಗಿದ್ದಾರೆ.ಕೂಡಲೇ ಆಪರೇಷನ್ ಮಾಡಿದ ವೈದ್ಯರು ಹೊಟ್ಟೆಯಿಂದ ಚಾಕು ಹೊರತೆಗೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.ಹೊಟ್ಟೆಯಲ್ಲಿ ಈ ಚಾಕು ಉಳಿದಿದ್ದರಿಂದ ನೋವು ಕಾಣಿಸಿಕೊಂಡಿದೆ.ಆದರೆ ಹುಡುಗನಿಗೆ ಪ್ರಾಣಹಾನಿ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಕಾರಣ ಸಣ್ಣಪುಟ್ಟ ಗಾಯವಾಗಿದ್ದರಿಂದ ಯಾವುದೇ ಅನುಮಾನ ಬಂದಿರಲಿಲ್ಲ.ಸ್ಥಳೀಯ ಆರೋಗ್ಯ ಕಾರ್ಯಕರ್ತರೊಬ್ಬರು ಸಣ್ಣ ಗಾಯಕ್ಕೆ ಹೊಲಿಗೆ ಹಾಕಿದ್ದರು.ಆದರೆ, ಹೊಟ್ಟೆಯಲ್ಲಿ ಚಾಕು ಉಳಿದಿರುವುದನ್ನು ಪತ್ತೆ ಮಾಡಲಾಗಲಿಲ್ಲ.ಮರುದಿನ ಹೊಟ್ಟೆನೋವು ಕಾಣಿಸಿಕೊಂಡಾಗ ಅಸಲಿ ವಿಷಯ ಹೊರಬಿದ್ದಿದೆ.