ನ್ಯೂಸ್ ನಾಟೌಟ್ : ಕಳೆದೆರಡು ದಿನಗಳಿಂದ ಕೊಡಗಿನ ಚೆಂಬು ಗ್ರಾಮದ ದಬ್ಬಡ್ಕ ಭಾಗದಲ್ಲಿ ಕಾಡಾನೆಗಳ ಉಪಟಳ ಜೋರಾಗಿದೆ. ಸತತವಾಗಿ ಆನೆ ದಾಳಿಯಿಂದಾಗಿ ಕೃಷಿ ತೋಟಗಳು ಹಾನಿಗೀಡಾಗಿದ್ದು, ರೈತರು ಕಂಗಾಲಾಗಿದ್ದಾರೆ.ಈ ಹಿನ್ನಲೆಯಲ್ಲಿ ವಿರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣನವರ ನಿರ್ದೇಶನದ ಮೇರೆಗೆ, ಕೆಪಿಸಿಸಿ ರಾಜ್ಯ ವಕ್ತಾರರಾದ ಶ್ರೀ ಸಂಕೇತ ಪೂವಯ್ಯ ರವರು ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕೃಷಿಕರೊಂದಿಗೆ ಸಮಾಲೋಚಿಸಿದರು.
ಸ್ಥಳಕ್ಕೆ ಸ್ಥಳೀಯ ಅರಣ್ಯಾಧಿಕಾರಿಗಳನ್ನು ಕರೆಸಿಕೊಂಡು ಅವರಿಂದ ವಿವರಣೆ ಪಡೆದರು.ಬಳಿಕ ಸಂಕೇತ್ ಪೂವಯ್ಯರವರು ಶಾಸಕರ ನಿರ್ದೇಶನದಂತೆ ಕೂಡಲೇ ಸ್ಥಳ ಪರೀಶೀಲನೆ ಮಾಡಿದರು.ಅದಾದ ನಂತರ ಸೂಕ್ತ ಪರಿಹಾರವನ್ನು ವೈಜ್ಞಾನಿಕವಾಗಿ ನೀಡಬೇಕೆಂಬ ಶಾಸಕರ ಸಂದೇಶವನ್ನು ಅಧಿಕಾರಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ತಮ್ಮ ಅಳಲನ್ನು ತೋಡಿಕೊಂಡ ಗ್ರಾಮಸ್ಥರು, ಆನೆ ಹಾವಳಿಯನ್ನು ಕಳೆದ 20 ವರ್ಷದಿಂದಲೂ ಅನುಭವಿಸಿಕೊಂಡು ಬಂದಿದ್ದೇವೆ. ಈವರೆಗೆ ಯಾರೂ ಪೂರಕವಾಗಿ ಸ್ಪಂದಿಸಿಲ್ಲ. ಅರಣ್ಯ ಇಲಾಖೆಯಿಂದಲೂ ಕೂಡ ಸೂಕ್ತ ರೀತಿಯಲ್ಲಿ ಪರಿಹಾರ ದೊರಕಿಲ್ಲ ಎಂದು ದೂರಿದರು. ಇದನ್ನು ಆಲಿಸಿದ ಸಂಕೇತ್ ಪೂವಯ್ಯರವರು ಕೂಡಲೇ ಶಾಸಕರಿಗೆ ವಿಷಯ ತಿಳಿಸಿದರು.
ಈ ವೇಳೆ ಕ್ಷಿಪ್ರವಾಗಿ ಸ್ಪಂದಿಸಿದ ಶಾಸಕ ಶ್ರೀ ಎ.ಎಸ್. ಪೊನ್ನಣ್ಣರವರು ಅಧಿಕಾರಿಗಳೊಂದಿಗೆ ಮಾತನಾಡಿದ ಕೂಡಲೇ ಬೆಳೆ ಹಾನಿ ನಷ್ಟಕ್ಕೆ ಅಗತ್ಯ ಪರಿಹಾರವನ್ನು ವಿತರಿಸುವಂತೆ ಸೂಚಿಸಿದರು. ಮಾತ್ರವಲ್ಲ ಆನೆ ದಾಳಿ ತಡೆಗೆ ಬೇಕಾದಂತಹ ಎಲ್ಲಾ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪಿ.ಎಲ್, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಆದಮ್, ಗಿರೀಶ್ ಹೊಸೂರು, ಶ್ರೀಮತಿ ಕುಸುಮ ಯೋಗೀಶ್ವರ್, ಹಿರಿಯರಾದ ಜೀವಿ ಗಣಪಯ್ಯ, ಸೋಮಣ್ಣ ಬಾಲಂಬಿ, ತಿರುಮಲ ಸೋನ, ವಾಸು ಪೂಜಾರಿ, ಹನೀಫ್ ಸಂಪಾಜೆ, ಭುವನೇಶ್ವರ ಕೊಪ್ಪದ, ರಘುನಾಥ್ ಬಾಲಂಬಿ, ಸ್ಥಳೀಯರಾದ ಗಿರೀಶ್ ಕೆದಂಬಾಡಿ, ದಿನಕರ ಗುಂಡಿಯ, ನಾಗೇಶ ಕಿರ್ಲಾಯ ಮತ್ತಿತರರು ಉಪಸ್ಥಿತರಿದ್ದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ 👇https://www.facebook.com/NewsNotOut2023/videos/746971337194551/?extid=CL-UNK-UNK-UNK-AN_GK0T-GK1C&mibextid=NnVzG8