ನ್ಯೂಸ್ ನಾಟೌಟ್: ಸಂಬಂಧಗಳು ಗಟ್ಟಿಯಾಗಿ ಬೆಸೆದುಕೊಳ್ಳಲು ನಂಬಿಕೆಯೇ ಆಧಾರ, ನಂಬಿಕೆ ಇಲ್ಲದಿದ್ದರೆ ಯಾವ ಸಂಬಂಧಗಳು ಕೂಡ ಉಳಿಯುವುದಿಲ್ಲ. ಉಡುಪಿಯ ಕಟಪಾಡಿ ಸಮೀಪ ಈ ಸಂಶಯದಿಂದ ಸಂಸಾರದಲ್ಲಿ ಅನಾಹುತವೇ ಆಗಿದೆ.
ಸಂಶಯ ಅತಿರೇಕಕ್ಕೆ ಹೋಗಿ ಪತ್ನಿ ತನ್ನ ಗಂಡನ ಮೇಲಿನ ಅನುಮಾನದಿಂದಾಗಿ ಮೆಣಸಿನ ಹುಡಿ ಮಿಶ್ರಿತ ಬಿಸಿನೀರು ಎರಚಿ ಜೀವ ಬೆದ* ರಿಕೆ ಹಾಕಿದ್ದಾಳೆ ಎನ್ನಲಾಗಿದೆ.
ಈ ಘಟನೆ ನಡೆದಿರುವುದು ಉಡುಪಿಯ ಸಮೀಪದ ಕಟಪಾಡಿಯ ಮಣಿಪುರ ಮಹಮ್ಮದ್ ಆಸಿಫ್ (22) ಸದ್ಯ ಪತ್ನಿಯಿಂದ ಸಂತ್ರಸ್ತರಾಗಿ ಸುಟ್ಟ ಗಾಯಗಳೊಂದಿಗೆ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸಿಫ್ ಮೂಲತಃ ಕಾರ್ಕಳದವನು. 11 ತಿಂಗಳುಗಳ ಹಿಂದೆ ಮಣಿಪುರದ ಗುಜ್ಜಿ ಎಂಬಲ್ಲಿನ ನಿವಾಸಿ ಹುಸೈನ್ ಮಗಳಾದ ಆಫ್ರಿನ್ಳನ್ನು ಆಸಿಫ್ ಮದುವೆಯಾಗಿದ್ದ. ಪತ್ನಿಯನ್ನು ತನ್ನ ಕಾರ್ಕಳದ ಮನೆಗೆ ಕರೆದುಕೊಂಡು ಹೋಗಿದ್ದಾನೆ.
ಸುಮಾರು ಒಂದುವರೆ ತಿಂಗಳುಗಳ ಕಾಲ ಗಂಡನ ಮನೆಯಲ್ಲಿದ್ದ ಆಫ್ರೀನ್, ತನ್ನ ತವರು ಮನೆಗೆ ತೆರಳಿದ್ದಾಳೆ. ಮನೆಗೆ ಮರಳುವಂತೆ ಆಸಿಫ್ ಆಫ್ರೀನ್ ಗೆ ಕರೆ ಮಾಡಿದಾಗ ʻನೀನೇ ಇಲ್ಲಿಗೆ ಬಾʼ ಎಂದಿದ್ದಾಳೆ. ಹಾಗಾಗಿ ಕಳೆದ 9 ತಿಂಗಳುಗಳಿಂದ ಹೆಂಡತಿಯ ಮನೆಯಲ್ಲಿ ಆಸಿಫ್ ವಾಸವಾಗಿದ್ದ.
ಹೆಂಡತಿ ಮನೆಗೆ ತೆರಳಿದ ಆಸಿಫ್ಗೆ ಅಲ್ಲಿ ಹೊಸ ಸಮಸ್ಯೆ ಶುರುವಾಯಿತು. ಯಾಕೆಂದರೆ ಪತ್ನಿ ಆಸಿಫ್ನ ಪ್ರತಿಯೊಂದು ನಡೆಯನ್ನೂ ಸಂಶಯದಿಂದಲೇ ನೋಡುತ್ತಿದ್ದಳಂತೆ. ಗಂಡನಿಗೆ ಬೇರೆ ಹುಡುಗಿರ ಜೊತೆ ಸಂಬಂಧವಿದೆ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದ ಆಫ್ರೀನ್, ಯಾವಾಗಲೂ ಸಂಶಯದಿಂದಲೇ ನೋಡುತ್ತಿದ್ದಳು ಎಂದು ಆರೋಪಿಸಲಾಗಿದೆ.
ಆಸಿಫ್ ಮೊಬೈಲ್ ಪರಿಶೀಲನೆ ಮಾಡುವುದು ಕರೆ, ವಾಟ್ಸಾಪ್ ಚಾಟ್, ಸೋಶಿಯಲ್ ಮೀಡಿಯಾದ ಚಾಟ್ ಗಳನ್ನು ಪತ್ನಿ ಆಫ್ರೀನ್ ಸದಾಕಾಲ ಸಂಶಯದಿಂದಲೇ ನೋಡುತ್ತಿದ್ದಳು ಎನ್ನಲಾಗಿದೆ.
ಮಂಗಳವಾರ ಸಂಜೆ ಆಸಿಫ್ ಎಂದಿನಂತೆ ಮೈದಾನದಲ್ಲಿ ಆಟವಾಡಿ ಮನೆಗೆ ಬಂದಿದ್ದಾನೆ. ಬಂದವನೇ ಬಾತ್ ರೂಮ್ಗೆ ಹೋಗಿ ಸ್ನಾನ ಮಾಡಲು ಶುರು ಮಾಡಿದ್ದಾನೆ. ಆಗ ಹೊರಗಿನಿಂದ ಆಫ್ರಿನ್ ಬಾಗಿಲು ಬಡಿದಿದ್ದಾಳೆ.
ಬಾಗಿಲು ತೆಗೆದಿದ್ದು ಒಂದೇ ಗೊತ್ತು. ಸ್ಟೀಲ್ ಪಾತ್ರೆಯಲ್ಲಿ ತಂದಿದ್ದ ಮೆಣಸಿನ ಹುಡಿ ಮಿಶ್ರಿತ ಬಿಸಿ ಬಿಸಿ ನೀರನ್ನು ಆಸೀಫ್ ಮೇಲೆ ಎರಚಿದ್ದಾಳೆ. ಆಸಿಫ್ ನೋವಿನಿಂದ ಕೂಗಿಕೊಂಡು ಮನೆಯಿಂದ ಹೊರಗೆ ಓಡಿದ್ದಾನೆ.
ಆದರೆ, ಅಲ್ಲಿ ಎದುರಾದ ಮಾವ ಹುಸೇನ್ ಅವರು ಆಸಿಫ್ನನ್ನು ಮನೆ ಒಳಗೆ ಕರೆದುಕೊಂಡು ಬಂದಿದ್ದಾರೆ. ಗಂಭೀರ ಗಾಯಗೊಂಡಿದ್ದ ಆಸಿಫ್ ಆಸ್ಪತ್ರೆಗೆ ಹೋಗುತ್ತೇನೆ ಎಂದರೂ ಅತ್ತೆ ಮೈಮುನ, ಮಾವ ಹುಸೇನ್, ನೆರೆಮನೆಯ ಲತೀಫ್ ಮತ್ತು ಪತ್ನಿ ಆಫ್ರಿನ್ ಸೇರಿ ಆಸಿಫ್ ಅವರನ್ನು ಮನೆಯಿಂದ ಹೊರಗೆ ಹೋಗಲು ಬಿಡದೆ ರೂಮಿನಲ್ಲಿ ಕೂಡಿ ಹಾಕಿದ್ದಾರೆ. ಅಲ್ಲದೆ ಈ ವಿಚಾರವನ್ನು ಹೊರಗೆ ತಿಳಿಸಿದರೆ ಬೆದರಿಕೆ ಹಾಕಿದ್ದಾರೆ ಎಂದು ಆಸಿಫ್ ದೂರು ನೀಡಿದ್ದಾರೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ 👇https://www.facebook.com/NewsNotOut2023/videos/746971337194551/?extid=CL-UNK-UNK-UNK-AN_GK0T-GK1C&mibextid=NnVzG8