ನ್ಯೂಸ್ ನಾಟೌಟ್: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಮರಕ್ಕೆ ಗುದ್ದಿದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ಸಮೀಪದ ಕುಂಬಾರಗಡಿಗೆ ಎಂಬಲ್ಲಿ ನಡೆದಿದೆ. ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆ ಎಂಬಲ್ಲಿ ಮಡಿಕೇರಿಯಿಂದ ಹೊರಟಿದ್ದ ಬಸ್ ಬಹುತೇಕ ಶಾಲಾ ಮಕ್ಕಳನ್ನೇ ತುಂಬಿಕೊಂಡು ಹೊರಟಿತ್ತು. ಆದರೆ ಇದ್ದಕ್ಕಿದ್ದಂತೆ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಬೆನ್ನಲ್ಲೇ ಬಸ್ ಮುಂದಕ್ಕೆ ಹೋಗಿ ದೊಡ್ಡ ಮರವೊಂದಕ್ಕೆ ಡಿಕ್ಕಿ ಹೊಡೆಯಿತು. ಮುಂದೆ ಮರ ಸಿಗದಿದ್ದರೆ ಬಸ್ ಹೋಗಿ 50 ಅಡಿ ಪ್ರಪಾತಕ್ಕೆ ಉರುಳಿ ಬೀಳುವ ಸಾಧ್ಯತೆ ಇತ್ತು. ಈ ಬಸ್ ನಲ್ಲಿ ಶಾಲಾ ಮಕ್ಕಳೇ ಹೆಚ್ಚಾಗಿ ಇದ್ದರು. ಅದೃಷ್ಟವಶಾತ್ ಎಲ್ಲರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೂರ್ಲಬ್ಬಿ ಈ ಒಂದು ರಸ್ತೆ ಹೆಚ್ಚು ಕಿರಿದಾಗಿತ್ತು. ಹೆಚ್ಚು ತಿರುವುಗಳೆ ಈ ರಸ್ತೆಯಲ್ಲಿದೆ. ತಿರುವುಗಳಲ್ಲಿ ಯಾವುದೇ ನಾಮಫಲಕಗಳು ಇಲ್ಲದೆ ಇರುವುದರಿಂದ ಹೊಸದಾಗಿ ಬರುವ ಚಾಲಕರಿಗೆ ರಸ್ತೆಯ ಅರಿವಿಲ್ಲದೆ ಈ ರೀತಿಯ ಅಪಘಾತಗಳು ಸಂಭವಿಸುತ್ತಿದ್ದು ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ 👇