ನ್ಯೂಸ್ ನಾಟೌಟ್ : ಅಂದಿನ ಕಾಲದಲ್ಲಿ ಜನ ಮಣ್ಣಿನ ಮಡಕೆಗಳನ್ನು ಉಪಯೋಗಿಸುತ್ತಿದ್ದರು.ಆಗ ಜನ ಆರೋಗ್ಯವಾಗಿದ್ದರು.ಆದರೆ ಯಾವಾಗ ಸ್ಟೀಲ್ , ಅಲ್ಯುಮಿನಿಯಂ ಪಾತ್ರೆಗಳು ಚಾಲ್ತಿಗೆ ಬಂದವೋ, ಕ್ರಮೇಣ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಹೌದು, ಇತ್ತೀಚಿನ ದಿನಗಳಲ್ಲಿ ಮನೆ ತುಂಬೆಲ್ಲಾ ಪ್ಲಾಸ್ಟಿಕ್ ಮಯವಾಗಿದೆ.ಇದೀಗ ಕಾಲ ಮುಂದುವರಿದಂತೆ ಎಲ್ಲ ಕಡೆಯೂ ನಾನ್ಸ್ಟಿಕ್ ಪಾತ್ರೆಗಳ ಹಾವಳಿ ಶುರುವಾಗಿದೆ.ಇದರಲ್ಲಿ ಅಡುಗೆ ಮಾಡಲು ಆರಂಭವಾಗುತ್ತಿದ್ದಂತೆ ಜನ ಅತೀ ಶೀಘ್ರದಲ್ಲಿ ಅಡುಗೆ ಮಾಡಲು ಆರಂಭಿಸಿದರು. ಆದರೆ, ಈ ನಾನ್ಸ್ಟಿಕ್ ಪಾತ್ರೆಗಳು ನಮ್ಮ ಆರೋಗ್ಯಕ್ಕೆ ಎಂತಹ ಪ್ರಭಾವವನ್ನು ಬೀರುತ್ತವೆ ಅನ್ನೋದಕ್ಕೆ ಈ ವರದಿ ನೋಡಿ..
ಮುಖ್ಯವಾಗಿ ನಾನ್ಸ್ಟಿಕ್ ಪಾತ್ರೆಗಳನ್ನು ಕ್ಲೀನ್ ಮಾಡೋದು ಈಸಿ ಅಂತ ಹೇಳಿ ಹೆಚ್ಚಿನವರು ಈ ಪಾತ್ರೆಗಳ ಮೊರೆ ಹೋಗುತ್ತಿದ್ದಾರೆ.ಆದರೆ ನಿಮಗೊತ್ತಾ.. ನಾನ್ಸ್ಟಿಕ್ನಲ್ಲಿ ಬಳಸಲಾಗುವ ರಾಸಾಯನಿಕ ನಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು. ನಾನ್ಸ್ಟಿಕ್ನಲ್ಲಿರುವ ಟೆಫ್ಲಾನ್ ಅಂಶ ಆರೋಗ್ಯಕ್ಕೆ ಕೆಟ್ಟ ಪರಿಣಾಮವನ್ನೇ ಬೀರುತ್ತವೆ. ಆದರೂ ಅದರ ಬಳಕೆಯನ್ನು ನಾವು ಕಡಿಮೆ ಮಾಡುವುದಿಲ್ಲ. ಇದರಿಂದ ಕ್ಯಾನ್ಸರ್ ಕೂಡ ಬರಬಹುದು ಜೋಕೆ..!
2 ವಿಧಗಳಲ್ಲಿ ಬರುವ ನಾನ್ಸ್ಟಿಕ್ ಪ್ಯಾನ್ಗಳ ಬಗ್ಗೆ ನೀವು ತಿಳಿದು ಕೊಳ್ಳಲೇ ಬೇಕು.ಅದರಲ್ಲಿ ಸಾಂಪ್ರದಾಯಿಕ ನಾನ್ಸ್ಟಿಕ್ ಪ್ಯಾನ್ಗಳು ಸಿಂಥೆಟಿಕ್ ಕೆಮಿಕಲ್ಗಳಿಂದ ತಯಾರಿಸಲಾಗಿರುತ್ತದೆ. ಇನ್ನೊಂದು ವಿಧವಾದ ಸಿರಾಮಿಕ್ ನಾನ್ಸ್ಟಿಕ್ ಪ್ಯಾನ್ಗಳು ಅಲ್ಯೂಮಿನಿಯಂ ಅಥವಾ ಇತರ ವಸ್ತುಗಳಿಂದ ಮಾಡಲ್ಪಟ್ಟಿರುತ್ತದೆ.
ಇದರಲ್ಲಿ ಸಾಂಪ್ರದಾಯಿಕ ನಾನ್ಸ್ಟಿಕ್ ಪ್ಯಾನ್ಗಳು ಹೆಚ್ಚು ಅಪಾಯಕಾರಿ.ಸಿರಾಮಿಕ್ ನಾನ್ಸ್ಟಿಕ್ ಪ್ಯಾನ್ಗಳಿಂದ ಅಪಾಯ ಸ್ವಲ್ಪ ಕಡಿಮೆ.ನಾನ್ಸ್ಟಿಕ್ ಪಾತ್ರೆಗಳಲ್ಲಿರುವ ಟೆಫ್ಲಾನ್ ಕೋಟಿಂಗ್ ಬಗ್ಗೆ ಹಲವು ಅಧ್ಯಯನಗಳು ನಡೆದಿದ್ದೂ ಬೇರೆ ಬೇರೆ ವರದಿಗಳು ಬಂದಿವೆ.ಕೆಲವು ಅಧ್ಯಯನಗಳು ಅವು ಹಾನಿಕಾರಕ ಮತ್ತು ಕ್ಯಾನ್ಸರ್ನಂತಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳುತ್ತವೆ.
ಇನ್ನೊಂದು ವಿಚಾರವೆಂದರೆ ಅತಿ ಬಿಸಿಯಾದಾಗ ಮಾತ್ರ ಈ ಸಮಸ್ಯೆ ಎದುರಾಗುವ ಬಗ್ಗೆ ವರದಿ ತಿಳಿಸಿದೆ.ಬಿಸಿ ಏರಿದಾಗ ಈ ಟೆಫ್ಲಾನ್ ಎಂಬ ರಾಸಾಯನಿಕ ತನ್ನ ಅಂಶವನ್ನು ಬಿಡುತ್ತದೆ.ಹೀಗಾಗಿ ಹೆಚ್ಚಿನ ಶಾಖದಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಿ. ಮಧ್ಯಮ ಅಥವಾ ಕಡಿಮೆ ಶಾಖದಲ್ಲಿ ಬೇಯಿಸಿ.ಅಡುಗೆ ಮಾಡುವಾಗ ಅಡುಗೆ ಮನೆಯಲ್ಲಿ ಗಾಳಿಯಾಡಲು ಅನುವು ಮಾಡಿಕೊಡಿ. ನೀವು ಅಡುಗೆ ಮಾಡುವಾಗ ನಿಮ್ಮ ಎಕ್ಸಾಸ್ಟ್ ಫ್ಯಾನ್ ಅನ್ನು ಆನ್ ಮಾಡಿ ಅಥವಾ ಕಿಟಕಿಗಳನ್ನು ತೆರೆದಿಡುವುದು ಉತ್ತಮ.ಮರದ, ಸಿಲಿಕೋನ್ ಅಥವಾ ಪ್ಲಾಸ್ಟಿಕ್ ಸೌಟ್ಗಳನ್ನು ಬಳಸುವುದು ಒಳ್ಳೆಯದು.