ನ್ಯೂಸ್ ನಾಟೌಟ್: ನಟಿ ಪ್ರಿಯಾಮಣಿ ತಮ್ಮ ಗ್ಲಾಮರ್ ಲುಕ್ ನಿಂದಲೇ ಸಿನಿ ಪ್ರಿಯರಿಗೆ ಚಿರಪರಿಚಿತ. ದಕ್ಷಿಣದ ಹಲವು ಸಿನಿಮಾಗಳನ್ನು ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಾಗಲೂ ಕೂಡ ಮಿಂಚಿದ್ದಾರೆ. ಇತ್ತೀಚೆಗೆ ಇವರು ನಟಿಸಿದ ಜವಾನ್ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ.
ಮದುವೆಯಾದ ಬಳಿಕ ಪ್ರಿಯಾಮಣಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಆ ಬಳಿಕ ಹೆಚ್ಚಿನ ಆಫರ್ ಗಳು ಅವರನ್ನು ಹುಡುಕಿಕೊಂಡು ಬರುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವವರು ಸುಮ್ಮನಿರಬೇಕಲ್ಲ ಹೇಳಿ.. ಟ್ರೋಲ್ ಮಾಡುತ್ತಲೇ ಒಬ್ಬ ಪ್ರಿಯಾಮಣಿಯವರನ್ನು ಆಂಟಿ ಎಂದು ಕರೆದುಬಿಟ್ಟಿದ್ದಾನೆ.
ಇದರಿಂದ ನಟಿಗೆ ಸಿಟ್ಟು ನೆತ್ತಿಗೇರಿದೆ. ತಮ್ಮನ್ನು ‘ಆಂಟಿ’ ಎಂದು ಟ್ರೋಲ್ ಮಾಡಿದವರಿಗೆ ಸರಿಯಾಗಿಯೇ ಉತ್ತರ ನೀಡಿದ್ದಾರೆ ಪ್ರಿಯಾಮಣಿ. ‘ನನಗೆ ಈಗ ವಯಸ್ಸು 38, ನಾನು ಈಗಲೂ ಹಾಟ್ ಆಗಿದ್ದೇನೆ, ನಿನ್ನ ಬಾಯಿ ಮುಚ್ಚಿಕೊ’ ಎಂದಿದ್ದಾರೆ ಪ್ರಿಯಾಮಣಿ. ಸದ್ಯ ನಟಿ ಪ್ರಸ್ತುತ ಮೋಹನ್ಲಾಲ್ ಜೊತೆಗೆ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.