ನ್ಯೂಸ್ ನಾಟೌಟ್: ಒಮ್ಮೆ ಎಜ್ಯುಕೇಶನ್ ಮುಗ್ದು ಜಾಬ್ಗೆ ಸೇರಿದ್ರೆ ಮತ್ತೆ ಅದರತ್ತ ಹಿಂತಿರುಗಿ ನೋಡೋರ ಸಂಖ್ಯೆಯೇ ವಿರಳ.ಅದ್ರರಲ್ಲೂ ೧೦ನೇ ತರಗತಿ ಕಂಪ್ಲೀಟ್ ಮಾಡಿದವರು ಮತ್ತೆ ಪಿಯುಸಿ ಮುಂದುವರಿಸಬೇಕೆಂದು ಬಯಸಿದ್ರೂ ಕೂಡ ಸಮಯದ ಅಭಾವದಿಂದಲೋ , ಇನ್ನೂ ಕೆಲವರು ಉದಾಸೀನತೆಯಿಂದಲೋ ಮತ್ತೆ ಶಿಕ್ಷಣ ಮುಂದುವರಿಸುವತ್ತ ಮನಸ್ಸೇ ಮಾಡಲ್ಲ.ಆದರೆ ಇಲ್ಲೊಬ್ಬರು ಆಟೋ ಚಾಲಕ ಶಾಲೆ ತೊರೆದು ಬರೋಬ್ಬರಿ 37 ವರ್ಷಗಳ ನಂತರ ಪಿಯುಸಿ ಪರೀಕ್ಷೆ ಬರೆದು ಭಾರಿ ಗಮನ ಸೆಳೆದಿದ್ದಾರೆ.
ಹೌದು, ಮನಸ್ಸಿದ್ದರೆ ಯಾವುದೇ ಕೆಲಸವನ್ನು ಬೇಕಾದರೂ ಮಾಡಬಹುದು.ಬೆಂಗಳೂರಿನ ಆಟೋ ಚಾಲಕ ಭಾಸ್ಕರ್ ಎಂಬುವವರು ಬರೋಬ್ಬರಿ ನಾಲ್ಕು ದಶಕದ ಬಳಿಕ ಪಿಯುಸಿ ಪರೀಕ್ಷೆ ಬರೆದಿದ್ದಾರೆ.ದೀರ್ಘಕಾಲದ ಬಳಿಕ ಮತ್ತೆ ಉನ್ನತ ಶಿಕ್ಷಣ ಪಡೆಯಲು 50 ವರ್ಷದ ಆಟೋ ಚಾಲಕ ಮುಂದಾಗಿದ್ದಾರೆ ಅನ್ನೋದು ವಿಶೇಷ.
ಆಟೋ ಚಾಲಕ ಭಾಸ್ಕರ್ ಆ.26ರಂದು ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆದಿದ್ದರು. ಈ ಬಗ್ಗೆ ಅವರದ್ದೇ ಆಟೋದಲ್ಲಿ ಪ್ರಯಾಣಿಸಿದ್ದ ನಿಧಿ ಅಗರ್ವಾಲ್ ಎಂಬುವವರು ಟ್ವೀಟ್ ಮಾಡಿ ಸಂಭ್ರಮ ವ್ಯಕ್ತ ಪಡಿಸಿದ್ದಾರೆ.1985ರಲ್ಲಿ ಎಸ್ಎಸ್ಎಲ್ಸಿ ಮುಗಿಸಿದ್ದ ಆಟೋ ಚಾಲಕ ಭಾಸ್ಕರ್ ಅವರು ಕೆಲಸದ ಒತ್ತಡದಿಂದಾಗಿ ಅವರ ಪಿಯುಸಿ ಪಾಸ್ ಮಾಡುವ ಕನಸು ಕನಸಾಗಿಯೇ ಉಳಿದಿತ್ತು.ಆದರೆ ಇದೀಗ ಪಿಯುಸಿ ಪರೀಕ್ಷೆ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News)ಸ್ಟಾರ್ ಆಗಿದ್ದಾರೆ.
ಅಂದ ಹಾಗೆ ಅವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು 3ನೇ ತರಗತಿ, ಮತ್ತೊಬ್ಬರು 6ನೇ ತರಗತಿ ಒದುತ್ತಿದ್ದಾರೆ.ಕಷ್ಟಗಳ ಮಧ್ಯೆಯೂ ಭಾಸ್ಕರ್ ಅವರು ನಗು ನಗುತ್ತಾ ಮಾತನಾಡುತ್ತಾರೆ ಇವರು ನಿಜವಾಗಿಯೂ ಪ್ರೇರಣದಾಯಕ ಎಂದು ನಿಧಿ ಅಗರ್ವಾಲ್ ತಿಳಿಸಿದ್ದಾರೆ.
ಆಟೋರಿಕ್ಷಾ ಚಾಲಕನಿಗೆ ವೈಯಕ್ತಿಕ ಕಾರಣಗಳಿಂದ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ನಾಲ್ಕು ದಶಕದ ಹಿಂದೆ ಶಿಕ್ಷಣ ಪೂರೈಸಲು ಆಗಿರಲಿಲ್ಲ. ಈಗ ಓದುವ ಹಂಬಲ ಬಂದಿದ್ದು, ಪಿಯುಸಿ ಪರೀಕ್ಷೆಯನ್ನೂ ಬರೆದಿದ್ದಾರೆ. ಸದ್ಯ ಪದವಿ ಶಿಕ್ಷಣ ಪಡೆಯುವ ತಯಾರಿಯಲ್ಲೂ ಇದ್ದಾರೆ.ಅಲ್ಲಿಗೆ ಶಿಕ್ಷಣದ ಬಗೆಗಿನ ಕನಸು ಈಡೇರಿದಂತಾಗುತ್ತದೆ.ಮುಂದಕ್ಕೆ ಏನು ಅನ್ನುವಂತದ್ದು ಇನ್ನಷ್ಟೇ ನಿರ್ಧಾರ ಮಾಡಬೇಕಷ್ಟೇ..
ನಿಧಿ ಅಗರ್ವಾಲ್ ಅವರ ಪೋಸ್ಟ್ ಅನ್ನು ಹಲವರು ಲೈಕ್ ಕೊಟ್ಟು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಆಟೋ ಚಾಲಕನ ಈ ಕಾರ್ಯದ ಬಗ್ಗೆ ಎಲ್ಲೆಡೆ ಮೆಚ್ಚುಗೆ ಸೂಚಿಸಿದ್ದಾರೆ.ಕೆಲವರು ಉನ್ನತ ಶಿಕ್ಷಣ ಪಡೆಯಲು ಚಾಲಕನಿಗೆ ಹಣಕಾಸು ಸಹಾಯ ಮಾಡುವುದಾಗಿಯೂ ಹೇಳಿದ್ದಾರೆ.