ಉಳ್ಳಾಲ: ಮನೆಯಿಂದ ಹೊರಟ ಯುವಕ ಕೆರೆಯಲ್ಲಿ ಶವವಾಗಿ ಪತ್ತೆ..! ಕೆಲಸಕ್ಕೆಂದು ಹೋದವನಿಗೆ ಆಗಿದ್ದೇನು..?

ನ್ಯೂಸ್ ನಾಟೌಟ್: ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಯುವಕನೋರ್ವನ ಮೃತದೇಹ ಶವವಾಗಿ ಕೊಳೆತ ಸ್ಥಿತಿಯಲ್ಲಿ ಸೋಮೇಶ್ವರದ ಕ್ಷೇತ್ರದ ಗದಾತೀರ್ಥ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಮೃತ ಯುವಕನನ್ನು ಉಳ್ಳಾಲ ತಾಲೂಕಿನ ಕೊಣಾಜೆಯ ಮುಚ್ಚಿಲ ಕೋಡಿಯ ನಿವಾಸಿ ‌ ವಿವೇಕ್ ಶೆಟ್ಟಿಗಾರ್ ( 32) ಎಂದು ಗುರುತಿಸಲಾಗಿದೆ. ಈತ ಮಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಸೋಮವಾರ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಅಂದು ರಾತ್ರಿ 9 ಗಂಟೆಯ ಸುಮಾರಿಗೆ ತಾಯಿಗೆ ಫೋನ್ ಮಾಡಿ ದೇವಸ್ಥಾನಕ್ಕೆ ತೆರಳುವುದಾಗಿ ತಿಳಿಸಿದ್ದರೆನ್ನಲಾಗಿದೆ. ಮಧ್ಯರಾತ್ರಿ 12 ಗಂಟೆಯಾದರೂ ಮಗ ಮನೆಗೆ ವಾಪಸ್ಸು ಬಾರದಿದ್ದಾಗ ತಾಯಿ ಫೋನ್ ಮಾಡಿದರೂ ವಿವೇಕ್ ಕರೆ ಸ್ವೀಕರಿಸಿರಲಿಲ್ಲ. ಅಲ್ಲದೇ ಮಂಗಳವಾರವೂ ಮನೆಗೂ ಬಾರದೆ,‌ ಮೊಬೈಲ್ ಕರೆಯನ್ನು ಸ್ವೀಕರಿಸದಿದ್ದಾಗ ಗಾಬರಿಗೊಂಡ ಮನೆಯವರು ಹುಡುಕಾಡಿದ್ದು, ಕೊನೆಗೆ ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ವಿವೇಕ್ ಅವರ ದ್ವಿಚಕ್ರ ವಾಹನದ ಜೊತೆ ಪಾದರಕ್ಷೆಗಳು ಮಂಗಳವಾರ ಬೆಳಿಗ್ಗೆ ಸೋಮೇಶ್ವರ ಕಡಲಕಿನಾರೆಯಲ್ಲಿ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ. ವಿವೇಕ್ ವೈಯಕ್ತಿಕ ಕಾರಣದಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದಿರಬೇಕು ಎಂದು ಶಂಕಿಸಲಾಗಿದೆ. ಮೃತ ವಿವೇಕ್ ತಂದೆ,ತಾಯಿ ಮತ್ತು ಏಕೈಕ ಸಹೋದರಿಯನ್ನು ಅಗಲಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles