ನ್ಯೂಸ್ ನಾಟೌಟ್: ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರು, ಶಾಲೆಯಿಂದ ಬೈಸಿಕಲ್ನಲ್ಲಿ ಮನೆಗೆ ಮರಳುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯ ದುಪಟ್ಟಾವನ್ನು ಎಳೆದಿದ್ದರಿಂದ ಆಕೆ ಕೆಳಗೆ ಬಿದ್ದು ಕೊನೆಯುಸಿರೆಳೆದ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ವಿದ್ಯಾರ್ಥಿನಿಯು ಸೈಕಲ್ನಲ್ಲಿ ತನ್ನ ಸಹಪಾಠಿ ಜತೆ ತೆರಳುತ್ತಿದ್ದಳು. ದುಪಟ್ಟಾ ಎಳೆದಿದ್ದರಿಂದ ಆಕೆ ಆಯತಪ್ಪಿ ರಸ್ತೆಯ ಮೇಲೆ ಬಿದ್ದಿದ್ದಳು. ಆಗ ಹಿಂದಿನಿಂದ ಬಂದ ಮತ್ತೊಂದು ಬೈಕ್, ಆಕೆಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲಿಯೇ ದುರಂತ ಅಂತ್ಯ ಹೊಂದಿದ್ದಾಳೆ.
ಜಿಲ್ಲೆಯ ಹನ್ಸ್ವರ್ ಪೊಲೀಸ್ ಠಾಣೆ ವ್ಯಾಪ್ತಿಯ ಹೀರಾಪುರ ಮಾರುಕಟ್ಟೆ ಸಮೀಪ ಘಟನೆ ಸಂಭವಿಸಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಕೃತ್ಯದಲ್ಲಿ ಭಾಗಿಯಾದ ಮೂವರು ಆರೋಪಿಗಳು ಪೊಲೀಸ್ ಎನ್ಕೌಂಟರ್ನಲ್ಲಿ ಗಾ* ಯಗೊಂಡಿದ್ದಾರೆ.
ಕೊನೆಯುಸಿರೆಳೆದ ಬಾಲಕಿ ಮತ್ತು ಆಕೆಯ ಸ್ನೇಹಿತೆ ಸೈಕಲ್ಗಳಲ್ಲಿ ತೆರಳುತ್ತಿದ್ದರು. ಬೈಕ್ನಲ್ಲಿ ಬಂದ ಇಬ್ಬರು ಆಕೆಯ ದುಪಟ್ಟಾವನ್ನು ಎಳೆಯಲು ಪ್ರಯತ್ನಿಸಿದ್ದಾರೆ. ಇದರಿಂದ ಆಕೆ ಆಯತಪ್ಪಿದ್ದು, ರಸ್ತೆಗೆ ಬಿದ್ದಿದ್ದಾಳೆ. ಆಕೆ ನೆಲದ ಮೇಲೆ ಬೀಳುತ್ತಿದ್ದಂತೆಯೇ ಮತ್ತೊಂದು ಬೈಕ್ ಆಕೆಗೆ ಬಲವಾಗಿ ಹೊಡೆದಿದೆ. ಇದರಿಂದ ಆಕೆಯ ತಲೆಗೆ ತೀವ್ರವಾಗಿ ಪೆ* ಟ್ಟಾಗಿದ್ದು, ಈ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಫೈಜಲ್, ಶಹಬಾಜ್ ಮತ್ತು ಅರ್ಬಾಜ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆ. ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಮೂವರನ್ನು ಶನಿವಾರ ಬಂಧಿಸಿದ್ದಾರೆ. ಮೂವರು ಆರೋಪಿಗಳನ್ನು ಭಾನುವಾರ ವೈದ್ಯಕೀಯ ತಪಾಸಣೆಗೆ ಎಂದು ಕರೆದೊಯ್ಯುವಾಗ ಅವರು ಪೊಲೀಸರ ರೈಫಲ್ ಕಸಿದುಕೊಂಡು ಓಡಲು ಪ್ರಯತ್ನಿಸಿದರು ಎಂದು ಹೇಳಲಾಗಿದೆ. ಈ ವೇಳೆ ಅವರನ್ನು ತಡೆಯಲು ಪೊಲೀಸರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.