ನ್ಯೂಸ್ ನಾಟೌಟ್: 73 ವರ್ಷದ ವೃದ್ಧನೊಬ್ಬ ಅಪ್ರಾಪ್ತೆಯ ಮೇಲೆ ಬಲಾತ್ಕಾರ ಎಸಗಿದ ಘಟನೆಯೊಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಮೀಸೆ ಮಂಜಯ್ಯ ಎಂಬಾತ ಈ ಕೃತ್ಯ ಮಾಡಿದ್ದು, ಈತ ಏಕಾಂಗಿ ಸಾಮಾಜಿಕ ಹೋರಾಟಗಾರ ಎಂದು ಬಿಂಬಿಸಿಕೊಂಡಿದ್ದ ಎನ್ನಲಾಗಿದೆ. ಈತ 13 ವರ್ಷದವಳ ಮೇಲೆ ಬಲತ್ಕಾರ ಎಸಗಿದ ಪರಿಣಾಮ ಇದೀಗ ಆಕೆ 2 ತಿಂಗಳ ಗರ್ಭಿಣಿಯಾಗಿದ್ದಾಳೆ.
ಸದ್ಯ ಅಪ್ರಾಪ್ತ ಮಗಳಿಗಾದ ಅನ್ಯಾಯ ಕಂಡು ತಾಯಿ ವಿ* ಷ ಸೇವಿಸಿದ್ದು, ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಮೀಸೆ ಮಂಜಯ್ಯನನ್ನು ವಶಕ್ಕೆ ಪಡೆದ ಪೊಲೀಸರು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಇನ್ನು ಅಪ್ರಾಪ್ತೆಗೂ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಪೊಲೀಸರು ಆಕೆಯನ್ನು ಬಾಲಮಂದಿರದ ವಶಕ್ಕೆ ನೀಡಿದ್ದಾರೆ ಎನ್ನಲಾಗಿದೆ.