ನ್ಯೂಸ್ ನಾಟೌಟ್ :ಮೊಬೈಲ್ ಚಾರ್ಜ್ಗಿಟ್ಟು ಮಾತನಾಡುತ್ತಿರುವ ವೇಳೆ ಸ್ಪೋಟಗೊಂಡು ನಾನಾ ರೀತಿಯ ಅವಾಂತರಗಳು ಆಗಿರುವ ಘಟನೆ ಬಗ್ಗೆ ನೀವು ಕೇಳಿದ್ದೀರಿ.ಆದರೆ ಇಲ್ಲೊಂದು ಕಡೆ ಕರೋಕೆ ಮೈಕ್ ಅನ್ನು ಚಾರ್ಜ್ಗೆ ಹಾಕಿ ಹಾಡುವ ವೇಳೆ ಮೈಕ್ ಸ್ಫೋಟಗೊಂಡಿರುವ ಘಟನೆಯೊಂದು ವರದಿಯಾಗಿದೆ.
ಬಾಲಕಿಯು ಮೈಕ್ನಲ್ಲಿ ಚಾರ್ಜ್ ಖಾಲಿಯಾಯಿತೆಂದು ಚಾರ್ಜ್ಗಿಟ್ಟಿದ್ದಳು.ಈ ವೇಳೆ ಹಾಡೋದಕ್ಕೆ ಶುರು ಮಾಡಿದ್ದಾಳೆ.ಸ್ವಲ್ಪ ಸಮಯದ ಬಳಿಕ ಮೈಕ್ ಬ್ಲಾಸ್ಟ್ ಆಗಿದೆ. ಈ ಘಟನೆ ವರದಿಯಾಗಿದ್ದು ಕೇರಳದ ಪಲಕ್ಕಾಡ್ ಜಿಲ್ಲೆಯ ಕಲ್ಲಡಿಕೋಡ್ ಎಂಬಲ್ಲಿ.ಅದೃಷ್ಟವಶಾತ್ 6 ವರ್ಷದ ಬಾಲಕಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಬಚಾವ್ ಆದ ಬಾಲಕಿಯ ಹೆಸರು ಫಿನ್ಸಾ ಇರೇನ್ ಎಂದು ತಿಳಿದು ಬಂದಿದೆ. ಈ ಘಟನೆ ಕಳೆದ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಾರೀ ಶಬ್ದದೊಂದಿಗೆ ಮೈಕ್ ಸ್ಫೋಟಗೊಂಡಿದ್ದು, ಬಾಲಕಿಗೆ ಏನೂ ಆಗಿಲ್ಲವೆಂದು ವರದಿಯಾಗಿದೆ.
ಬಾಲಕಿ ತಾನೂ ಹಾಡೋದಕ್ಕೆ ಕರೋಕೆ ಮೈಕ್ ಬೇಕು ಎಂದಿದ್ದಕ್ಕೆ ಆಕೆಯ ಆಸೆಯಂತೆ ಆನ್ಲೈನ್ ಸೈಟ್ ಮೂಲಕ ಕರೋಕೆ ಮೈಕ್ನ್ನು ಖರೀದಿಸಲಾಗಿತ್ತು.ಕೇವಲ 600 ರೂಪಾಯಿಗೆ ಖರೀದಿಸಿದ್ದ ಈ ಮೈಕ್ ಚಾರ್ಜ್ ಗಿಟ್ಟು ಹಾಡಿದ ಬಳಿಕ ಸ್ಪೋಟಗೊಂಡಿದೆ.
ಅದೇನೇ ಇರಲಿ ಯಾವುದೇ ವಸ್ತುಗಳನ್ನು ಖರೀದಿಸುವಾಗಲೂ ಬಹಳ ಜಾಗರೂಕರಾಗಿರಬೇಕು.ಅದರಲ್ಲೂ ಕೆಲವು ಸಾಧನಗಳನ್ನುಚಾರ್ಜ್ಗೆ ಹಾಕಿ ಬಳಸುವ ಅಭ್ಯಾಸವನ್ನು ಮಾಡಬೇಕು. ಬಳಿಕ ಅದನ್ನು ಉಪಯೋಗಿಸುವುದು ಒಳ್ಳೆಯದು. ಕೆಲವೊಮ್ಮೆ ಸಣ್ಣ ನಿರ್ಲಕ್ಷ್ಯವು ಪ್ರಾಣಕ್ಕೆ ಸಂಚಕಾರ ತರಬಹುದು.
ಈ ಬಗ್ಗೆ ಪೋಷಕರು ಜಾಗರೂಕರಾಗಿರಬೇಕು.ಮಕ್ಕಳು ತಿಳಿಯದೇ ಮಾಡುವ ತಪ್ಪಿಗೆ ಅವಾಂತರಗಳಾಗುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು.ಸದ್ಯಕ್ಕೆ ಈ ಪ್ರಕರಣದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಹೀಗಾಗಿ ಇನ್ನು ಮುಂದೆಯಾದರೂ ಈ ರೀತಿಯ ಘಟನೆಗಳಾಗದಂತೆ ಎಚ್ಚರದಿಂದಿರುವ ಅಗತ್ಯವಿದೆ.
——————