ನ್ಯೂಸ್ ನಾಟೌಟ್ :ಹಾವುಗಳು ಎಲ್ಲಿ ಹೇಗೆ ಅಡಗಿ ಕುಳಿತು ಕೊಂಡಿರುತ್ತವೆ ಅನ್ನೋದೇ ಗೊತ್ತಾಗಲ್ಲ.ಇದೀಗ ಅಪರೂಪಕ್ಕೊಮ್ಮೆ ಬರೋ ಮಳೆಯಿಂದಾಗಿ ಹಾವುಗಳು ಮನೆ ಕಡೆ ತೆವಳಿಕೊಂಡು ಬರೋದೇ ಹೆಚ್ಚು.ಹೀಗಾಗಿ ಮನೆ ಸುತ್ತ ಮುತ್ತ ಭಾರಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಇದೀಗ ಶೂವೊಳಗಿಂದ ನಾಗರಹಾವೊಂದು ಹೆಡೆ ಎತ್ತಿ ನಿಂತ ಘಟನೆಯೊಂದು ಕೊಡಗಿನಿಂದ ವರದಿಯಾಗಿದೆ.
ಅಂದು ಬೆಳಗ್ಗೆ ಎಂದಿನಂತೆ ಆ ಮನೆಯಿಂದ ಕೆಲಸಕ್ಕೆ ಹೊರಡಲೆಂದು ರೆಡಿಯಾಗಿದ್ದರು.ಈ ವೇಳೆ ಶೂ ಹಾಕಿಕೊಳ್ಳಲು ಮುಂದಾದಾಗ ಆ ಸಮಯದಲ್ಲಿ ಶೂ ಒಳಗಿಂದ ನಾಗರಹಾವು ಹೆಡೆ ಎತ್ತಿದ ಪ್ರಸಂಗ ನೆಲ್ಯಹುದಿಕೇರಿ ಎಂಬಲ್ಲಿ ನಡೆದಿದೆ.ನೆಲ್ಯಹುದಿಕೇರಿ ನಿವಾಸಿ ಶಾಲಿ ಎಂಬುವವರು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ತೆರಳಲು ತಯಾರಾಗಿದ್ದು, ಮನೆಯ ಮುಂಭಾಗದಲ್ಲಿ ಇಟ್ಟಿದ್ದ ಶೂ ಧರಿಸಲು ಮುಂದಾಗಿದ್ದಾರೆ. ಈ ವೇಳೆ ಅರದಲ್ಲಿದ್ದ ನಾಗರಹಾವು ಕಾಣಿಸಿಕೊಂಡಿದ್ದು, ಹೆಡೆ ಎತ್ತಿ ನಿಂತಿದೆ.
ಕೂಡಲೇ ಮಹಿಳೆ ಗಾಬರಿಯಿಂದ ದೂರ ಸರಿದಿದ್ದಾರೆ. ತಕ್ಷಣ ಸ್ಥಳೀಯ ಉರಗಪ್ರೇಮಿ ಸುರೇಶ್ ಅವರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದಾಗ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಹಾವನ್ನು ಸೆರೆಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಮಾತನಾಡಿದ ಸುರೇಶ್, ‘ಬೆಳಗ್ಗೆ ಮನೆಯಿಂದ ತರಾತುರಿಯಲ್ಲಿ ತೆರಳುವಾಗ ಪಾದರಕ್ಷೆ ಧರಿಸುವ ವೇಳೆ ಎಚ್ಚರಿಕೆ ವಹಿಸಬೇಕು’.ಹಾವುಗಳ ವಿಚಾರದಲ್ಲಿ ಎಷ್ಟೇ ಜಾಗರೂಕರಾಗಿದ್ದರೂ ಸಾಕಾಗದು.ರಾತ್ರಿ ವೇಳೆಯೂ ಇವುಗಳ ಸಂಚಾರವಿರುತ್ತೆ.ಹೀಗಾಗಿ ಮಕ್ಕಳು ಇರೋ ಕಡೆ ಇನ್ನೂ ಎಚ್ಚರಿಕೆಯಿಂದಿರುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟರು.