ನ್ಯೂಸ್ನಾಟೌಟ್: ಜಗತ್ತಿನ ಯಾವುದೇ ದೇಶಗಳಿಗೆ ಹೋದರೂ ಹಿಂದಿ ಭಾಷೆ ಗೊತ್ತಿದ್ದರೆ ಸಂಪರ್ಕ ಸಾಧಿಸಲು ಸುಲಭವಾಗುತ್ತದೆ. ವಿದ್ಯಾರ್ಥಿಗಳು ಹಿಂದಿ ಭಾಷೆ ಕಲಿಯಬೇಕು ಎಂದು ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಪ್ರಾoಶುಪಾಲೆ ಹರಿಣಿ ಪುತ್ತೂರಾಯ ಹೇಳಿದರು.
ಅವರು ಸುಳ್ಯದ ಎನ್ಎಂಪಿಯು ಕಾಲೇಜಿನಲ್ಲಿ ಕಾಲೇಜಿನ ಹಿಂದಿ ವಿಭಾಗದಿಂದ ಆಯೋಜಿಸಿದ ಹಿಂದಿ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪದವಿಯ ಹಿಂದಿ ವಿಭಾಗದ ಮುಖ್ಯಸ್ಥ ಮಮತಾ ಎಚ್.ವಿ. ಮಾತನಾಡಿ, ನಮ್ಮ ರಾಷ್ಟ್ರ ಭಾಷೆಯಾಗಿರುವ ಹಿಂದಿಯನ್ನು ಉಳಿಸಿ ಬೆಳೆಸಬೇಕು. ಇತರ ಭಾಷೆಗಳೊಂದಿಗೆ ಹಿಂದಿಯನ್ನು ಸೇರಿಸಿ ಅದರ ಪರಿಶುದ್ಧತೆಯನ್ನು ನಾಶ ಮಾಡಬಾರದು ಎಂದರು.
ಕಾರ್ಯಕ್ರಮದಲ್ಲಿ ವಿ. ಕ್ಷೇಮಾಧಿಕಾರಿ ರೇಷ್ಮಾ ಎಂ.ಎಂ, ಕಾರ್ಯಕ್ರಮ ಸಂಯೋಜಕಿ, ಹಿಂದಿ ಉಪನ್ಯಾಸಕಿ ರಾಜೇಶ್ವರಿ ಎ. ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಅನನ್ಯ ಎಂ.ಎಚ್. ಮತ್ತು ಬಳಗ ಪ್ರಾರ್ಥಿಸಿದರು. ಅನನ್ಯ ಎ. ಸ್ವಾಗತಿಸಿ, ಹಿಂದಿ ಉಪನ್ಯಾಸಕಿ ರಾಜೇಶ್ವರಿ ಎ. ಪ್ರಾಸ್ತಾವಿಕ ಮಾತನಾಡಿದರು. ರೋಜಾ ವಂದಿಸಿದರು. ಆಜ್ಞ ಐಪಲ್ ನಿರೂಪಿಸಿದರು.