ನ್ಯೂಸ್ ನಾಟೌಟ್ : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನೇರ್ತನೆ ಎಂಬಲ್ಲಿ ಗುರುವಾರ ಹಗಲು ಹೊತ್ತಿನಲ್ಲಿಯೇ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.
ಪೊಸಳಿಕೆ ಸಮೀಪ ಕೃಷಿಯಿಲ್ಲದೆ ಕಾಡು ಬೆಳೆದಿರುವ ಖಾಸಗಿ ಜಾಗದಲ್ಲಿ ಬುಧವಾರ ಆನೆಗಳು ಕಾಣಿಸಿಕೊಂಡಿದ್ದು, ಅದೇ ಪರಿಸರದಲ್ಲಿ ಆನೆಗಳು ತಿರುಗಾಟ ನಡೆಸಿರುವುದನ್ನು ಈ ಹಿಂದೆಯೂ ನೋಡಿರುವುದಾಗಿ ಜನರು ತಿಳಿಸಿದ್ದಾರೆ.
ಒಂದು ಮರಿಯಾನೆ ಹಾಗೂ ಎರಡು ದೊಡ್ಡ ಆನೆಗಳು ಈ ಗುಂಪಿನಲ್ಲಿ ಇದ್ದು ನೇರ್ತನೆ ಅರಣ್ಯದಿಂದ ಹೊರ ಬಂದು ಜನವಸತಿ ಪ್ರದೇಶಗಳ ಮೂಲಕ ಒಂದೆರಡು ಕಿ.ಮೀ ಕೃಷಿಗಳನ್ನು ನಾಶಮಾಡುತ್ತಾ ಮುಂದುವರಿದಿವೆ ಎನ್ನಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳು ಈಪ್ರದೇಶದಲ್ಲಿ ಕಾಣಿಸಿಕೊಂಡು ಕೃಷಿಗೆ ವ್ಯಾಪಕ ಹಾನಿಯುಂಟು ಮಾಡಿದ್ದಾವೆ ಎನ್ನಲಾಗಿದೆ.
ಧರ್ಮಸ್ಥಳದ ಬಸ್ ನಿಲ್ದಾಣದ ಸಮೀಪದ ವರೆಗೂ ಕಾಡಾನೆಗಳು ಬಂದಿದ್ದವು ಎಂದು ಸ್ಥಳೀಯರು ಮಾಹಿತಿ ನೀಡುದ್ದು, ಬುಧವಾರ ತಡ ರಾತ್ರಿಯೂ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಗಳನ್ನು ಓಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು ಆದರೆ ಅದು ಯಾವುದೂ ಪ್ರಯೋಜನ ಎಂದು ವರದಿ ತಿಳಿಸಿದೆ.