ನ್ಯೂಸ್ ನಾಟೌಟ್: ಅನಿರೀಕ್ಷಿತ ಕಾರಣಗಳಿಂದ ಪತಿ-ಪತ್ನಿ ಬೇರೆಯಾದರೆ ಮಕ್ಕಳು ಯಾರಾದರೂ ಒಬ್ಬರ ಜೊತೆಗಿರುತ್ತಾರೆ. ತಮ್ಮ ಹೆತ್ತವರು ಮರುಮದುವೆ ಮಾಡಿಕೊಂಡರೆ ಹೆಚ್ಚಿನ ಮಕ್ಕಳು ವಿರೋಧಿಸುತ್ತಾರೆ. ಆದರೆ ಅಮೇರಿಕಾದ ಬಾಲಕ ತಂದೆ ತಾಯಿ ಬೇರ್ಪಟ್ಟ ಬಳಿಕ ತನ್ನ ತಾಯಿಯ ಮರು ಮದುವೆ ಮಾಡಿಲು ಒಪ್ಪಿದ್ದು ಮದುವೆಯಲ್ಲಿ ಮಲತಂದೆಯನ್ನು ಸ್ವಾಗತಿಸಿದ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜೋರ್ಡಾನ್ ಎಂಬ ಬಾಲಕ ತನ್ನ ತಾಯಿ ಮರುಮದುವೆಯಾಗುತ್ತಿರುವಾಗ ತನ್ನ ಮಲತಂದೆಗೆ ಸ್ವಾಗತದ ಮಾತುಗಳನ್ನಾಡುವುದನ್ನು ಕಾಣಬಹುದು. ಮದುವೆಗೆ ಬಂದಿದ್ದ ಅತಿಥಿಗಳು ಭಾಷಣವನ್ನು ಗಮನವಿಟ್ಟು ಆಲಿಸಿದ್ದಾರೆ.
ಜೋರ್ಡಾನ್ ತನ್ನ ಭಾಷಣದಲ್ಲಿ ತನ್ನ ಮಲತಂದೆ ವಿನ್ನಿ ತನ್ನ ತಾಯಿಯನ್ನು ಮದುವೆಯಾಗಿರುವುದು ಅದೃಷ್ಟವೆಂದು ಭಾವಿಸುತ್ತೇನೆ ಎಂದೆಲ್ಲ ತಾಯಿಯನ್ನು ಹೊಗಳಿ ಮಲತಂದೆಯನ್ನು ಸ್ವಾಗತಿಸಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆಯುತ್ತಿದೆ.
ಅನೇಕ ಮಕ್ಕಳು ತಮ್ಮ ಹೆತ್ತವರು ಮರುಮದುವೆ ಆಗುವುದನ್ನು ಭಾವನಾತ್ಮಕವಾಗಿ ಒಪ್ಪಿಕೊಳ್ಳುವುದಿಲ್ಲ, ಆದರೆ ಈ ಘಟನೆ ವಿಭಿನ್ನವಾಗಿದೆ. ಹಲವರು ಈ ಬಗ್ಗೆ ಪರ ವಿರೊಧ ಚರ್ಚೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.