ನ್ಯೂಸ್ ನಾಟೌಟ್ : ಇತ್ತೀಚೆಗೆ ನಡೆದ ಕೃಷ್ಣ ಜನ್ಮಾಷ್ಟಮಿ ದೇಶಾದ್ಯಂತ ಸಂಭ್ರಮಕ್ಕೆ ಕಾರಣವಾಗಿತ್ತು. ದಿಲ್ಲಿಯಿಂದ ಹಳ್ಳಿವರೆಗಿನ ಕೃಷ್ಣನ ಹುಟ್ಟಿದ ದಿನದ ಆಚರಣೆ ವೈಶಿಷ್ಟ್ಯ ಒಂದೇ ರೀತಿಯಾಗಿತ್ತು. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಡ್ತಲೆ ಗ್ರಾಮದ ಸ್ಪಂದನ ಗೆಳೆಯರ ಬಳಗ (ರಿ) ಕೂಡ ಅದ್ದೂರಿಯಾಗಿ ತಮ್ಮ ಐದನೇ ವರ್ಷದ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಿತು.
ಸೆ.10 ರಂದು ನಡೆದ ಕಾರ್ಯಕ್ರಮವು ಅಡ್ತಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಡ್ತಲೆ-ಬೆದ್ರುಪಣೆ ಮಲೆ ದೈವಗಳ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಮಾಸ್ತರ್ ಅಡ್ತಲೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ತೇಜಸ್ವಿ ಕಡಪಳ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ್ ಅಡ್ತಲೆ, ಶಾಲಾ ಮುಖ್ಯ ಶಿಕ್ಷಕ ಮಾಧವ ಮಾಸ್ತರ್, ಸ.ಮಾ.ಹಿ.ಪ್ರಾ.ಶಾಲೆ ಅರಂತೋಡು ದೈಹಿಕ ಶಿಕ್ಷಣ ಶಿಕ್ಷಕಿ ಸರಸ್ವತಿ ಅಡ್ತಲೆ, ಗೌರವ ಸಲಹೆಗಾರ ಭವಾನಿಶಂಕರ ಅಡ್ತಲೆ ಉಪಸ್ಥಿತರಿದ್ದರು. ಬಳಗದ ಸದಸ್ಯ ಜಗದೀಶ್ ಕಾಯರ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಕಿಶೋರ್ ಅಡ್ಕ ವಂದಿಸಿದರು. ರಂಜಿತ್ ಅಡ್ತಲೆ ನಿರೂಪಿಸಿದರು. ನಂತರ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ್ ಬೆದ್ರುಪಣೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ , ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ಗ್ರಾಮ ಪಂಚಾಯತ್ ಸದಸ್ಯ ಸುಜಯಾ ಲೋಹಿತ್ ಮೇಲಡ್ತಲೆ , ಗೌರವ ಸಲಹೆಗಾರ ಭವಾನಿಶಂಕರ ಅಡ್ತಲೆ , ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ, ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಿಂಡಿಮನೆ ಭಾಗವಹಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಕೇಶವ ಅಡ್ತಲೆ ಹಾಗೂ ಗ್ರಾಮದ ಭ್ರಷ್ಟ ಆಡಳಿತಾಧಿಕಾರಿಯನ್ನು ಲೋಕಾಯುಕ್ತ ಬಲೆಗೆ ಬೀಳಿಸಿದ ಹರಿಪ್ರಸಾದ್ ಅಡ್ತಲೆ ಇವರನ್ನ ಸ್ಪಂದನ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. ನಂತರ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಬಳಗದ ಉಪಾಧ್ಯಕ್ಷ ಲೋಹಿತ್ ಮೇಲಡ್ತಲೆ ಸ್ವಾಗತಿಸಿ, ಸದಸ್ಯ ರಂಜಿತ್ ಅಡ್ತಲೆ ನಿರೂಪಿಸಿ, ನಿರ್ದೇಶಕ ಪ್ರವೀಣ್ ಪಾನತ್ತಿಲ ವಂದಿಸಿದರು.