ನ್ಯೂಸ್ ನಾಟೌಟ್ :ಪ್ರತಿನಿತ್ಯ ಅಂಗಡಿಯಿಂದ ಮನೆಗೆ ಹಾಲು ತಕೊಂಡು ಬರ್ತೀವಿ.ದನಕರುಗಳನ್ನು ಸಾಕುವವರಿದ್ದರೆ ಮನೆಯಲ್ಲಿಯೇ ಹಾಲು ಸಿಗಬಹುದು.ಇದರ ಜತೆಗೆ ಮೇಕೆ ಹಾಲು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹೇಳಿ ಎಷ್ಟೇ ದುಬಾರಿಯಾದ್ರೂ ಖರೀದಿಸುವವರು ಇದ್ದಾರೆ.ಅದಕ್ಕಿಂತಲೂ ದುಬಾರಿಯಾಗಿರೋದು ಕತ್ತೆ ಹಾಲು ಅಂತ ಇನ್ನೂ ಕೆಲವರು ಹೇಳಬಹುದು.. ಹೀಗೆ ವಿವಿಧ ರೀತಿಯ ಹಾಲಿನ ಬಗ್ಗೆ ನೀವು ಕೇಳಿದ್ದೀರಿ? ಆದರೆ ಅತ್ಯಂತ ದುಬಾರಿ ಹಾಲು ಯಾವುದು ಅಂತ ನಿಮಗೆ ಗೊತ್ತೆ..?
ಹೌದು , ಹೀಗೊಂದು ಪ್ರಶ್ನೆ ಎದ್ದಿದೆ.ಆದರೆ ಇದ್ಯಾವುದು ಕೂಡ ಸರಿ ಉತ್ತರ ಅಲ್ಲ..ಯಾಕಂದ್ರೆ ಇಲಿ ಹಾಲು (Rat milk) ಅತ್ಯಂತ ದುಬಾರಿ ಹಾಲು ಎನ್ನುವುದು ಇದಕ್ಕೆ ಸರಿಯಾದ ಉತ್ತರ.ಅರೆ..! ಶಾಕ್ ಆಯ್ತಾ? ಆದ್ರೆ ಇದು ನಿಜ, ಇಲಿ ಹಾಲು ತುಂಬಾ ದುಬಾರಿ. ಇದು ಏಕೆ ದುಬಾರಿ? ಅದರೆ ‘ಇಲಿ ಹಾಲು’ ಪಡೆಯುವುದು ಸುಲಭವಲ್ಲ.
30 ನಿಮಿಷಗಳ ಪ್ರಕ್ರಿಯೆಯಲ್ಲಿ ಇಲಿಯಿಂದ ಕೊಂಚ ಮಾತ್ರ ಹಾಲು ಉತ್ಪಾದಿಸಲು ಸಾಧ್ಯ. ಆದರೆ 1 ಲೀಟರ್ ಹಾಲು ಪಡೆಯಲು ಬರೋಬ್ಬರಿ ನಾಲ್ಕು ಸಾವಿರ ಇಲಿಗಳು (40thousand rats) ಬೇಕಾಗುತ್ತವೆಯಂತೆ. ಈ ಇಲಿಗಳ 1 ಲೀಟರ್ ಹಾಲಿನ ಮೌಲ್ಯ 23 ಸಾವಿರ ಯುರೋಗಳು. ಅಂದರೆ ಬರೋಬ್ಬರಿ 18 ಲಕ್ಷ ರೂಪಾಯಿ..!
ಇಲಿ ಹಾಲನ್ನು ಸಂಶೋಧನೆಯ ಸಾಧನವಾಗಿ ಬಳಸಲಾಗುತ್ತದೆ.ಮಲೇರಿಯಾ ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡುವ ಔಷಧಿ, ವಸ್ತುಗಳನ್ನು ತಯಾರಿಸಲು ಇಲಿ ಹಾಲನ್ನು ಬಳಸಲಾಗುತ್ತಂತೆ. ಹೀಗಾಗಿ ಇಲಿಗಳ ಹಾಲು ದುಬಾರಿಯಾಗಿದೆ. ಹಾಗಿದ್ದರೆ ವಿಜ್ಞಾನಿಗಳು ಇಲಿಗಳ ಹಾಲನ್ನು ಏಕೆ ಬಳಸುತ್ತಾರೆ ಗೊತ್ತೆ?
ಸಂಶೋಧಕರ ನೆಚ್ಚಿನ ಪ್ರಾಣಿ ಎಂದರೆ ಇಲಿ ಅನ್ನೋದು ಗೊತ್ತೇ ಇದೆ. ಏಕೆಂದರೆ ಇಲಿಗಳ ಡಿಎನ್ಎ (DNA) ಬಗ್ಗೆ ತುಂಬಾ ಕಡಿಮೆ ತಿಳಿದಿದೆ. ಇತರ ಯಾವುದೇ ಪ್ರಾಣಿಗಳ ಡಿಎನ್ಎಗಿಂತ ಹೆಚ್ಚು ಎಫೆಕ್ಟಿವ್. ಇದು ಮನುಷ್ಯನ ದೇಹಕ್ಕೆ ರಿಲೇಟ್ ಆಗಿರುತ್ತದೆ. ಆದ್ದರಿಂದ ಪ್ರಯೋಗದ ಫಲಿತಾಂಶಗಳನ್ನು ವಿಶ್ಲೇಷಿಸುವುದು ಸುಲಭವಾಗುತ್ತದೆ. ಎಲ್ಲಾ ಪ್ರಯೋಗಗಳಿಗೆ ಸಾವಿರಾರು ಪ್ರಾಣಿಗಳು ಬೇಕಾಗುತ್ತವೆ. ಏಕೆಂದರೆ ಸಾವಿರಾರು ಹಸುಗಳಿಗಿಂತ ಸಾವಿರಾರು ಇಲಿಗಳನ್ನು ನಿರ್ವಹಿಸುವುದು ಹೆಚ್ಚು ಪ್ರಾಯೋಗಿಕ.
ಮಲೇರಿಯಾ ರೋಗವನ್ನು ಗುಣಪಡಿಸಲು ಮತ್ತು ಸಂಶೋಧನಾ ಸಾಮಗ್ರಿಗಳ ತಯಾರಿಕೆಗಾಗಿ ಇಲಿ ಹಾಲನ್ನು ಜೆನೆಟಿಕ್ ಎಂಜಿನಿಯರಿಂಗ್ ಮಾಡಲಾಗುತ್ತದೆ. ಹಾಗಾಗಿ ಇಲಿ ಹಾಲು ತುಂಬಾನೆ ದುಬಾರಿಯಾಗಿವೆ ಎಂದು ಸಂಶೋಧನೆಗಳು ತಿಳಿಸಿವೆ.