ನ್ಯೂಸ್ ನಾಟೌಟ್: ಪಾಕ್ ನ ಸುಯಿ ಎಂಬ ಗ್ಯಾಸ್ಫೀಲ್ಡ್ ಪಟ್ಟಣದಲ್ಲಿ ಸ್ಥಳೀಯ ಪಂದ್ಯಾವಳಿಗೆ ತೆರಳುತ್ತಿದ್ದ ವೇಳೆ ಪ್ರಾದೇಶಿಕ ಪ್ರತ್ಯೇಕವಾದಿಗಳು 6 ಮಂದಿ ಫುಟ್ಬಾಲ್ ಆಟಗಾರರನ್ನು ಅಪಹರಣ ಮಾಡಿದ್ದರು.
ಸ್ಥಳೀಯ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಫುಟ್ಬಾಲ್ ಆಟಗಾರರೆಲ್ಲರೂ 17 ರಿಂದ 20 ವರ್ಷದೊಳಗಿನವರಾಗಿದ್ದಾರೆ. ಕಳೆದ ಶನಿವಾರ ಬಲೂಚಿಸ್ತಾನ್ ಪ್ರಾಂತ್ಯದ ಡೇರಾ ಬುಗ್ಟಿ ಜಿಲ್ಲೆಯ ಗ್ಯಾಸ್ಫೀಲ್ಡ್ ಪಟ್ಟಣ ಸುಯಿಯಲ್ಲಿ ಪಂದ್ಯಾವಳಿಗೆ ತೆರಳುತ್ತಿದ್ದಾಗ ಈ ಪ್ರಕರಣ ನಡೆದಿದೆ ಎಂದು ತಿಳಿಸಿದ್ದಾರೆ.
ಬಲೂಚಿಸ್ತಾನ್ ಪಾಕಿಸ್ತಾನದ ಅತಿದೊಡ್ಡ ಮತ್ತು ಕಡಿಮೆ ಜನಸಂಖ್ಯೆಯ ಪ್ರಾಂತ್ಯವಾಗಿದೆ, ಈ ಪ್ರದೇಶ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಇತರ ಪ್ರದೇಶಗಳಿಗೆ ಹೋಲಿಸಿದರೆ ತೀವ್ರ ಹಿಂದುಳಿದಿದೆ. ಮೂಲಭೂತ ಸೌಕರ್ಯಗಳೂ ಈ ಪ್ರದೇಶದಲ್ಲಿ ಇಲ್ಲ. ಹೀಗಾಗಿ ಈ ಪ್ರಾಂತ್ಯದಲ್ಲಿ ತಮಗೆ ಸರ್ಕಾರದಿಂದ ನ್ಯಾಯಯುತವಾದ ಪಾಲು ಸಿಗುತ್ತಿಲ್ಲ, ಅಭಿವೃದ್ದಿ ಆಗುತ್ತಿಲ್ಲ ಎಂದು ಬಲೂಚಿಸ್ತಾನ್ ಜನರು ದೀರ್ಘಕಾಲದಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಇಂತಹ ಕಾರಣಗಳಿಗಾಗಿಯೇ ಒಂದು ಡಜನ್ಗಿಂತಲೂ ಹೆಚ್ಚು ಪ್ರತ್ಯೇಕತಾವಾದಿ ಗುಂಪುಗಳು ಈ ಬಲೂಚಿಸ್ತಾನ್ನಲ್ಲಿ ಇದೆ ಎನ್ನಲಾಗುತ್ತಿದೆ.
ಪಾಕಿಸ್ತಾನದ ಆರು ಮಂದಿ ಫುಟ್ಬಾಲ್ ಆಟಗಾರರು ಅಪಹರಣ (Kidnap Case) ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಕಳೆದ ವಾರ ಈ ಅಪಹರಣ ಘಟನೆ ನಡೆದಿದ್ದು, ಇನ್ನೂ ಕೂಡ ಅವರ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.ಪಾಕಿಸ್ತಾನದ ಪ್ರಕ್ಷುಬ್ಧ ನೈಋತ್ಯದಲ್ಲಿ ಪ್ರಾದೇಶಿಕ ಪ್ರತ್ಯೇಕತಾವಾದಿಗಳಿಂದ ಅಪಹರಿಸಿಸಲ್ಪಟ್ಟ ಆರು ಯುವ ಫುಟ್ಬಾಲ್ ಆಟಗಾರರಿಗಾಗಿ ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
20 ವರ್ಷದ ಆಟಗಾರ ಅಮೀರ್ ಹುಸೇನ್ ಅವರ ತಂದೆ ಜಾಕಿರ್ ಹುಸೇನ್ ಮಾತನಾಡಿ, ಈ ಘಟನೆಯಿಂದ ನಮ್ಮ ಕುಟುಂಬ ತೀವ್ರ ಆತಂಕಕ್ಕೆ ಒಳಗಾಗಿದೆ. ಅವನನ್ನು ಅಪಹರಿಸಿದಾಗಿನಿಂದ ನಾವು ಆತನಿಂದ ಯಾವುದೇ ಮೆಸೇಜ್ ಅಥವಾ ಕಾಲ್ ಸ್ವೀಕರಿಸಿಲ್ಲ ಮತ್ತು ಅವನನ್ನು ಅಪಹರಣ ಮಾಡಿದವರು ಕೂಡ ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.