ನ್ಯೂಸ್ ನಾಟೌಟ್: ಹರಿದ ಅಥವಾ ಕೊಳಕಾದ ನೋಟುಗಳನ್ನು ದೇಶದಾದ್ಯಂತ RBI ಕಚೇರಿಗಳು ಅಥವಾ ಬ್ಯಾಂಕ್ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಆದರೆ, ಮರುಪಾವತಿಯು ನೋಟಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್(RBI) ಕೊಳಕಾದ, ಹರಿದ ನೋಟುಗಳಿಗೆ ವಿನಿಮಯದ ಸೌಲಭ್ಯವನ್ನು ಒದಗಿಸುವಂತೆ ಭಾರತದ ಪ್ರತಿಯೊಂದು ಬ್ಯಾಂಕ್ ಗೆ ಆದೇಶಿಸಿದೆ. ಅದರ ಜೊತೆಗೆ ಆ ನೋಟುಗಳ ಮೌಲ್ಯವನ್ನು ನಿರ್ಧರಿಸಲು ಕೂಡಾ ನಿಯಮಗಳನ್ನು ಮಾಡಲಾಗಿದೆ.
ಭಾರತದಲ್ಲಿ ಕಾಗದದ ನೋಟುಗಳನ್ನು ಬಳಸಲಾಗುತ್ತದೆ. ಆದ್ದರಿಂದ ಅವುಗಳು ಕೊಳಕಾಗುವುದು ಹರಿಯುವುದು ಬಹಳ ಸಾಮಾನ್ಯ. ಎಷ್ಟೋ ಬಾರಿ ಬ್ಯಾಂಕ್ ಎಟಿಎಂನಿಂದ ಹಣ ತೆಗೆಯಲು ಹೋದಾಗಲೂ ಹರಿದ ನೋಟುಗಳು ಹೊರಬರುತ್ತವೆ. ನೋಟಗಳು ಸ್ವಲ್ಪ ಹರಿದರೂ ಯಾರು ಕೂಡಾ ಅದನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮ ಬಳಿ ಕೂಡಾ ಅಂಥಹ ನೋಟುಗಳಿದ್ದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡುವುದು ಸಹಜ. ಆದರೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಈ ಬಗ್ಗೆ ನಿಯಮಗಳನ್ನು ಹೊರಡಿಸಿದೆ.
ಕೊಳಕು ಮತ್ತುಹರಿದ ನೋಟುಗಳ ಮೌಲ್ಯವನ್ನು RBI ನಿರ್ಧರಿಸುತ್ತದೆ. ನೋಟಿನ ಮೌಲ್ಯವು ನೋಟಿನ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಗ್ರಾಹಕರು ನೋಟಿನ ಮೌಲ್ಯವನ್ನು ಪೂರ್ಣ, ಅರ್ಧ ಮೊತ್ತವನ್ನು ಪಡೆಯಬಹುದು. ಕೆಲವೊಮ್ಮೆ ಏನೂ ಸಿಗದೇ ಕೂಡಾ ಇರಬಹುದು. ನೋಟು ಕಡಿಮೆ ಮ್ಯುಟಿಲೇಟೆಡ್ ಆಗಿದ್ದರೆ ಸರಿಯಾದ ಬೆಲೆಯನ್ನು ಪಡೆಯಬಹುದು. ತುಂಬಾ ಹಾನಿಗೊಳಗಾಗಿದ್ದರೆ, ಅರ್ಧದಷ್ಟು ಬೆಲೆಯನ್ನು ಪಡೆಯಬಹುದು ಅಥವಾ ಪಡೆಯದೇ ಇರಬಹುದು.
ಅದೇ ಸಮಯದಲ್ಲಿ, 500 ರೂ ನೋಟಿನ ಉದ್ದ 15 ಸೆಂ, ಅಗಲ 6.6 ಸೆಂ ಮತ್ತು ವಿಸ್ತೀರ್ಣ 99 ಚದರ ಸೆಂಟಿಮೀಟರ್. ಅಂತಹ ಸಂದರ್ಭದಲ್ಲಿ, 500 ರೂ ನೋಟಿನ ಗಾತ್ರವು 80 ಚದರ ಸೆಂಟಿಮೀಟರ್ ಆಗಿದ್ದರೆ, ಪೂರ್ಣ ಮರುಪಾವತಿಯನ್ನು ನೀಡಲಾಗುತ್ತದೆ, ಆದರೆ ಅದು 40 ಚದರ ಸೆಂಟಿಮೀಟರ್ ಆಗಿದ್ದರೆ, ಅರ್ಧದಷ್ಟು ಮರುಪಾವತಿಯನ್ನು ನೀಡಲಾಗುತ್ತದೆ ಎಂದು ಆರ್ ಬಿ ಐ ತಿಳಿಸಿದೆ.