ನ್ಯೂಸ್ ನಾಟೌಟ್ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಬ್ಯೂಟಿಯಿಂದಲೇ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.ವಯಸ್ಸು ೫೦ ಸಮೀಪಿಸಿದರೂ ಕೂಡ ತಮ್ಮ ಸೌಂದರ್ಯಕ್ಕೆ ಒಂಚೂರು ಧಕ್ಕೆಯಾಗದ ರೀತಿಯಲ್ಲಿ ಕಾಪಾಡಿಕೊಂಡು ಬರುತ್ತಿದ್ದಾರೆ.ಆದರೆ ಈ ನಟಿ ಅಂದು ಅವರ ತಾಯಿ ಎದುರಿಸಿದ್ದ ಸವಾಲುಗಳ ಬಗ್ಗೆ ಸ್ಪೋಟಕ ವಿಷಯವೊಂದನ್ನು ತೆರೆದಿಟ್ಟಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ‘ಸುಖಿ’ ಚಿತ್ರದ ಪ್ರಚಾರದಲ್ಲಿ ಇದೀಗ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.ಖಾಸಗಿ ವಾಹಿನಿ ಜತೆ ಮಾತನಾಡಿದ ಅವರು, “ನಾನು ತಾಯಿ ಗರ್ಭದಲ್ಲಿದ್ದಾಗ, ತಾಯಿಯ ಸ್ಥಿತಿ ಗಂಭೀರವಾಗಿತ್ತು.ಹೀಗಾಗಿ ನಾನು ಹುಟ್ಟುವ ಸಾಧ್ಯತೆಗಳು ತೀರಾ ಕಡಿಮೆ ಎಂಬಂತಿತ್ತು.ತಾಯಿಗೆ ಗರ್ಭಪಾತ ಅನಿವಾರ್ಯ ಎಂದು ಎಲ್ಲರೂ ಭಾವಿಸಿದ್ದರು. ಜತೆಗೆ ವೈದ್ಯರು ಕೂಡ ಗರ್ಭಪಾತ ಮಾಡುವಂತೆ ಸೂಚಿಸಿದ್ದರು ಎಂದು ಕಣ್ಣೀರು ಸುರಿಸಿದ್ದಾರೆ.
ಹೌದು,ನಟಿ ಶಿಲ್ಪಾ ಶೆಟ್ಟಿ ತಾಯಿ ಗರ್ಭದಲ್ಲಿರುವಾಗ ತಾಯಿಗೆ ನಿರಂತರವಾಗಿ ರಕ್ತಸ್ರಾವವಾಗುತ್ತಿತ್ತಂತೆ. ಹೀಗಾಗಿ ಗರ್ಭಪಾತ ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದರು. ಅಂತಹ ಸನ್ನಿವೇಶದಲ್ಲಿ ನಾನು ಭೂಮಿಗೆ ಬಂದಿದ್ದೇನೆ ಎಂದು ಶಿಲ್ಪಾ ಹೇಳಿದ್ದಾರೆ.
ನನ್ನ ತಾಯಿ ಇಷ್ಟು ಸವಾಲುಗಳ ಮಧ್ಯೆಯೂ ನನಗೆ ಜನ್ಮ ನೀಡಿದ್ದಾರೆ.ನನ್ನ ಹುಟ್ಟಿನ ಹಿಂದೆ ಯಾವುದೋ ಬಲವಾದ ಕಾರಣ ಇದ್ದಿರಬೇಕು. ನನಗೆ ಇದು ಪುನರ್ಜನ್ಮವಿದ್ದಂತೆ.ಹೀಗಾಗಿ ಬದುಕಿನ ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯುತ್ತಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲೂ ಹಲವು ಕಷ್ಟಗಳು ಇದ್ದೇ ಇರುತ್ತವೆ ಹಾಗಾಗಿ ಅವರಲ್ಲಿ ಸ್ಫೂರ್ತಿ ತುಂಬಲು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತೇನೆ. ಬದುಕು ಯಾರಿಗೂ ಸುಲಭವಲ್ಲ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದರೂ ಅವರು ಕರಾವಳಿಯ ಬೆಡಗಿ.ಮಂಗಳೂರಿಗೆ ಬಂದಾಗಲೆಲ್ಲ ಮಂಗಳೂರಿ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿ, ದೈವ-ದೇವರ ಮೊರೆ ಹೋಗುತ್ತಾರೆ. ಬಾಲಿವುಡ್ ನಟ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾಗಿರುವ ನಟಿ, ಸದ್ಯ ಸಿನಿಮಾಗಳಲ್ಲಿಯೂ ತೊಡಗಿಕೊಂಡಿದ್ದಾರೆ. ‘ಸುಖಿ’ ಚಿತ್ರದ ಮೂಲಕ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.