ದೇವಸ್ಥಾನದ (Temple) ಆವರಣದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ಭಕ್ತರೊಬ್ಬರು ಹೃದಯಾಘಾತದಿಂದ (Heart Attack)ಕೊನೆಯುಸಿರೆಳೆದ ಘಟನೆ ಮಂಗಳೂರಿನ ಸುರತ್ಕಲ್ ಎಂಬಲ್ಲಿನ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು(ಸೆ.10) ನಡೆದಿದೆ.
52 ವರ್ಷದ ಕೃಷ್ಣ ಭಟ್ ಹೃದಯಾಘಾತದಿಂದ ಕುಸಿದುಬಿದ್ದು ದೇವರಪಾದ ಸೇರಿದ ವ್ಯಕ್ತಿಯಾಗಿದ್ದು, ಮುಲ್ಕಿಯ ನಿವಾಸಿ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ಕೃಷ್ಣಭಟ್ ನಡೆದುಕೊಂಡು ಬರುತ್ತಿರುವಾಗಲೇ ಹೃದಯಾಘಾತ ಸಂಭವಿಸಿ ಕುಸಿದುಬಿದ್ದಿದ್ದಾರೆ.
ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಕೃಷ್ಣ ಭಟ್ ಕುಸಿದು ಬಿದ್ದ ದೃಶ್ಯ ಸೆರೆಯಾಗಿದ್ದು, ದೇವಸ್ಥಾನ ಆವರಣದಲ್ಲಿ ಪ್ರಾದಕ್ಷಿಣೆ ಹಾಕುತ್ತಿದ್ದ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದೆ. ಕೂಡಲೇ ಸ್ಥಳದಲ್ಲಿದ್ದ ಇತರೇ ಭಕ್ತರು ಅವರ ರಕ್ಷಣೆಗೆ ಬಂದು ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ವೇಳೆಗೆ ಕೃಷ್ಣಭಟ್ ಕೊನೆಯುಸಿರೆಳೆದಿದ್ದರು ಎಂದು ವರದಿ ತಿಳಿಸಿದೆ.