ನ್ಯೂಸ್ ನಾಟೌಟ್: ಯುವತಿಯೊಬ್ಬಳು ಆಕೆಯ ಮದುವೆ ದಿನಾಂಕ ಫಿಕ್ಸ್ ಆಗಿದ್ದ ದಿನದಂದು ಆಕೆಯ ಪದವಿಯ ಅಂತಿಮ ಸೆಮಿಸ್ಟರ್ನ ಪರೀಕ್ಷೆ ಕೂಡ ಇತ್ತು. ಇವೆರಡರಲ್ಲಿ ಯಾವುದು ಮುಖ್ಯ ಮದುವೆಯ ಪದವಿಯ ಪರೀಕ್ಷೆಯ ಎಂದು ನಿರ್ಧರಿಸಲಾಗದೆ ಯುವತಿ ಚಿಂತೆಯಲ್ಲಿ ತೊಡಗಿದ್ದಳು ಎನ್ನಲಾಗಿದೆ.
ಮದುವೆ ಮತ್ತು ಪರೀಕ್ಷೆ ಎರಡು ಒಂದೇ ದಿನ ಬಂದಿದೆ ಏನು ಮಾಡಲಿ ಎಂದು ತನ್ನ ಎನ್ಎಸ್ಎಸ್ ಸಂಘದ ಕಾರ್ಯಕ್ರಮ ಸಂಯೋಜನಾಧಿಕಾರಿ ಬಾಲಕೃಷ್ಣ ಹೆಗಡೆಯವರನ್ನು ಸಲಹೆ ಕೇಳಿದ್ದಾಳೆ. ವಿದ್ಯಾರ್ಥಿನಿಗೆ ಪರೀಕ್ಷೆ ಮತ್ತು ಮದುವೆ ಎರಡೂ ಕೂಡ ಜೀವನದಲ್ಲಿ ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟ ಬಾಲಕೃಷ್ಣ ಹೆಗಡೆ ಎರಡನ್ನು ನಿಭಾಯಿಸುವಂತೆ ಸಲಹೆ ನೀಡಿದ್ದಾರೆ.
ಇದರಿಂದ ಪ್ರೋತ್ಸಾಹಗೊಂಡ ವಿದ್ಯಾರ್ಥಿ ಮದುವೆಯ ಹೊಸ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಮಧ್ಯದಲ್ಲಿ ಪರೀಕ್ಷೆಗಾಗಿ ಬಿಡುವು ಮಾಡಿಕೊಂಡು ವರನ ಜೊತೆಗೆ ಕಾಲೇಜಿಗೆ ಬಂದು ಪರೀಕ್ಷೆ ಬರೆದಿದ್ದು ವಿಶೇಷವಾಗಿತ್ತು.
ಶಿವಮೊಗ್ಗದ ಹರಕೆರೆ ಗ್ರಾಮದ ಮನೆಯಲ್ಲಿ ಮದುವೆ ಸಂಭ್ರಮ ಸಡಗರ ಮನೆಮಾಡಿತ್ತು. ಚೆನ್ನೈನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಫ್ರಾನ್ಸಿಸ್ ಜೊತೆ ಸತ್ಯವತಿ ಮದುವೆ ಇಂದು ನಡೆದಿತ್ತು. ಬೆಳಗ್ಗೆ ಮದುವೆ ಕಾರ್ಯ ಮುಗಿಸಿ 9:30ಕ್ಕೆ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದು ಶಿವಮೊಗ್ಗದ ಕಮಲ ನೆಹರು ಕಾಲೇಜಿನಲ್ಲಿ ಪರೀಕ್ಷೆ ಬರೆದಳು.
ಹಸೆಮಣೆಯಿಂದ ಕಾಲೇಜಿಗೆ ಬಂದು ಪದವಿ ಪರೀಕ್ಷೆ ಬರೆದ ಪ್ರತಿಭಾನ್ವಿತೆ ಸತ್ಯವತಿ ಬಿ.ಮದುವೆ ಮತ್ತು ಪದವಿ ಪರೀಕ್ಷೆ ಎರಡನ್ನು ಎದುರಿಸಿದ್ದಾರೆ. ಎನ್.ಎಸ್.ಎಸ್.ನ ನಿಷ್ಠಾವಂತ ಸ್ವಯಂಸೇವಕಿ ಸತ್ಯವತಿಗೆ ಇಂದು ಎರಡು ಪರೀಕ್ಷೆಗಳು. ಬಿಎ ಪದವಿಯ ಅಂತಿಮ ವರ್ಷದ 8ನೇ ಸೆಮಿಸ್ಟರ್ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಬರೆದಿದ್ದಾಳೆ.