ನ್ಯೂಸ್ ನಾಟೌಟ್ :ವ್ಯಕ್ತಿಯೊಬ್ಬರು ದೊಣ್ಣೆಯಿಂದ ಹೊಡೆದು ಬಾಲಕ ಬಾಲಕ ಕೊನೆಯುಸಿರೆಳೆದ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ.ತಡರಾತ್ರಿ ಬಾಲಕ ಆರೋಪಿಯ ಮನೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.ಬಾಲಕ ಆರೋಪಿಯ ಮಗಳನ್ನು ಪ್ರೀತಿಸುತ್ತಿದ್ದ ಎಂಬ ಶಂಕೆಯಿದ್ದು,ಇದೇ ಕಾರಣಕ್ಕೆ ಈ ಕೃತ್ಯವಾಯಿತೇ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಆದರೆ ಪೊಲೀಸ್ ತನಿಖೆಯಿಂದಲೇ ಸಂತ್ಯಾಂಶ ಏನು ಅನ್ನೋದು ಬಯಲಾಗಬೇಕಿದೆ.
ನಿನ್ನೆ ತಡರಾತ್ರಿ ಆರೋಪಿ ಮನೆಗೆ 16 ವರ್ಷದ ಬಾಲಕ ತೆರಳಿದ್ದನು. ಈ ವೇಳೆ, ಆರೋಪಿ ದೊಣ್ಣೆಯಿಂದ ಬಡಿದಿದ್ದಾನೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು.ಆದರೆ ದಾರಿ ಮಧ್ಯೆ ಈತ ಶಾಶ್ವತವಾಗಿ ಕಣ್ಣು ಮುಚ್ಚಿದ್ದಾನೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿರಾಜಪೇಟೆ ಗ್ರಾಮೀಣ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.