ಕರಾವಳಿ

ರೈತರ ಸ್ವಾಭಿಮಾನಕ್ಕೆ ತೊಂದರೆಯಾದರೆ ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತೇವೆ : ಲೋಲಜಾಕ್ಷ ಭೂತಕಲ್ಲು

190
Spread the love

ಅರಂತೋಡು: ರೈತ ವಿರೋಧಿ ಮೂರು ಕೃಷಿ ಮಸೂದೆಗಳನ್ನು ಹಿಂದಕ್ಕೆ  ಪಡೆಯುದಾಗಿ ನಮ್ಮ ಪ್ರಧಾನಿಯವರು ಈಗಾಗಲೇ ಘೋಷಿಸಿದ್ದು ಇದು ಕೇವಲ ಭರವಸೆಯಾಗಿ ಉಳಿಯಬಾರದು ರೈತರ ಸ್ವಾಭಿಮಾನಕ್ಕೆ ಮತ್ತೆ ತೊಂದರೆಯಾದರೆ  ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಸುಳ್ಯ ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಹೇಳಿದರು.

ಸುಳ್ಯ ತಾಲೂಕು ಸಂಘದ ಕಾರ್ಯದರ್ಶಿ ಭರತ್‌ ಕುಮಾರ್ ಮಾತನಾಡಿ,ಸರಕಾರ ಮೊದಲೆ ಆಲೋಚನೆ ಮಾಡುತ್ತಿದ್ದರೆ ಇಷ್ಟೆಲ್ಲ ಸಾವು  ನೋವು ಗೊಂದಲಗಳು ನಡೆಯುತ್ತಿರಲಿಲ್ಲ ಎಂದರು. ಉಪಾಧ್ಯಕ್ಷ ತೀರ್ಥರಾಮ ಪರ್ನೋಜಿ, ಸುಳ್ಯ ಕೋಡಿ ಮಾಧವ ಗೌಡ, ಜಿಲ್ಲಾ ಉಪಾಧ್ಯಕ್ಷ ದಿವಾಕರ , ಸಂಚಾಲಕ ಸ್ಟೇಬಾಸ್ಟಿನ್, ಖಜಾಂಜಿ ದೇವಪ್ಪ ಕುಂದಲ್ಪಾಡಿ, ಜತೆ ಕಾರ್ಯದರ್ಶಿ ಚೆನ್ನಕೇಶವ, ತೊಡಿಕಾನ ವಲಯ ಅಧ್ಯಕ್ಷ ಕೇಶವ ಪ್ರಸಾದ್ ತೊಡಿಕಾನ, ಪ್ರಮುಖರಾದ ರಾಜೇಶ್ ಭಟ್ ತೊಡಿಕಾನ, ತೀರ್ಥರಾಮ ಬಾಳಕಜೆ, ರಾಮಕೃಷ್ಣ ಕುಂಟು ಕಾಡು, ಗುರು ಪ್ರಕಾಶ್ ನಾರ್ಕೋಡು, ಶಿವಪ್ರಸಾದ್, ರವೀಂದ್ರ ಪಂಜಿಕೋಡಿ, ತಿಮ್ಮಯ್ಯ ಮೆತ್ತಡ್ಕ ಇತರರು ಉಪಸ್ಥಿತರಿದ್ದರು.

See also  ಸುಳ್ಯ:ವಿದ್ಯಾರ್ಥಿಗಳ ಪ್ರವಾಸದಿಂದುಳಿದ ನಗದನ್ನೇ ದೋಚಿದ ಖದೀಮರು..!,ಶಾಲೆಯ ಬೀಗ ಮುರಿದು ಒಳಪ್ರವೇಶಿಸಿ ಕೃತ್ಯ, ಕಳ್ಳರು ದೋಚಿಕೊಂಡು ಹೋದ ಹಣವೆಷ್ಟು?
  Ad Widget   Ad Widget   Ad Widget