ನ್ಯೂಸ್ ನಾಟೌಟ್: ಮಾದಕ ವ್ಯಸನದ ಚಟಕ್ಕೆ ಬಿದ್ದು ಯುವಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ. ಕೊನೆಗೆ ಹತಾಶರಾಗಿ ಆತ್ಮ* ಹ* ತ್ಯೆಯಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ. ಇಲ್ಲೊಬ್ಬ ಬೈಕ್ ಕಳ್ಳತನ ಪ್ರಕರಣದ ಆರೋಪಿ ಗಾಂಜಾ ಸಿಕ್ಕಿಲ್ಲವೆಂದು ನೊಂದು ಆ ತ್ಮ* ಹ* ತ್ಯೆಗೆ ಶರಣಾಗಿದ್ದಾನೆ. ತನ್ನ ಮನೆಯಲ್ಲೇ ಕೃತ್ಯ ಎಸಗಿಕೊಂಡಿದ್ದು ದಾರಿ ತಪ್ಪಿದ ಮಗನ ಕಳೆದುಕೊಂಡು ಕುಟುಂಬ ಕಣ್ಣೀರಾಗಿದೆ.
ತಲಪಾಡಿ ಗ್ರಾಮದ ನಾರ್ಲ ಪದವು ನಿವಾಸಿ ಪೈಝಲ್(24) ಬೈಕ್ ಕಳವುಗೈದು ಉಳ್ಳಾಲ ಪೊಲೀಸರಿಂದ ಬಂಧಿತನಾಗಿದ್ದ. ಈತನ ವಿರುದ್ಧ ವಿಚಾರಣೆ ನಡೆಯುತ್ತಿತ್ತು. ಮಾತ್ರವಲ್ಲ ಈತನ ವಿರುದ್ಧ ಗಾಂಜಾ ಸೇವನೆಯ ಪ್ರಕರಣವೂ ದಾಖಲಾಗಿತ್ತು.
ಫೈಝಲ್ ಇಂದು ತನ್ನ ಮನೆಯ ಅಂತಸ್ತಿನ ಕೊಠಡಿಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ಕುಣಿಕೆ ಬಿಗಿದು ಆ ತ್ಮ * ಹ* ತ್ಯೆಗೈದಿದ್ದಾನೆ. ಮನೆಯಲ್ಲಿ ಫೈಸಲ್ ತಾಯಿ, ತಂಗಿ ಮತ್ತು ಅಜ್ಜಿ ಇದ್ದು ತಾಯಿ ಮನೆಯ ಮೇಲಿನ ಅಂತಸ್ತಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಫೈಝಲ್ ನಿತ್ಯವೂ ಬೆಳಗ್ಗೆ 9ರಿಂದ 10 ಗಂಟೆ ಅವಧಿಯಲ್ಲಿ ಗಾಂಜಾ ಸೇದುವ ಚಟ ಬೆಳೆಸಿದ್ದನಂತೆ. ಇಂದು ಗಾಂಜಾ ಸಿಗದ ಕಾರಣದಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಗೈದಿರುವುದಾಗಿ ತಿಳಿದುಬಂದಿದೆ.
ಉಳ್ಳಾಲ ಠಾಣೆ ವ್ಯಾಪ್ತಿಯ ಪಂಡಿತ್ ಹೌಸ್ ಎಂಬಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲಿ ಫೈಝಲ್ ನನ್ನ ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ತಿಳಿದು ಬಂದಿದೆ