ನ್ಯೂಸ್ ನಾಟೌಟ್: ವಾರದಲ್ಲಿ ಒಂದು ದಿನ ರಜೆ ಸಿಗಲಿಲ್ಲವೆಂದರೆ ಕೆಂಡದಂತಹ ಕೋಪ ಬರುತ್ತದೆ. ವಿಶ್ರಾಂತಿ ಇಲ್ಲದೆ ಹೇಗೆ ಕೆಲಸ ಮಾಡೋದು ಅನ್ನುವ ಉತ್ತರ ಸಾಮಾನ್ಯವಾಗಿ ನೌಕರರಲ್ಲಿ ಕೇಳಿ ಬರುತ್ತದೆ. ಆದರೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ (PM MODI) ದೇಶಕ್ಕಾಗಿಯೇ ತಮ್ಮನ್ನು ತಾವು ಅರ್ಪಿಸಿಕೊಂಡವರು ಅನ್ನೋದು ಮತ್ತೊಮ್ಮೆ ಸಾಕ್ಷಿ ಸಮೇತ ನಿರೂಪಿತವಾಗಿದೆ.
ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸು ಹೆಚ್ಚಿಸಿದ್ದಾರೆ. ವಿಶ್ವದ ವಿವಿಧ ರಾಷ್ಟ್ರಗಳು ಇಂದು ಮೋದಿಯ ಗುಣಗಾನ ಮಾಡುತ್ತಿವೆ. ಮೋದಿ ಇಷ್ಟು ಹೆಸರು ಮಾಡಿರುವುದರ ಹಿಂದೆ ಬಲವಾದ ರಾಜತಾಂತ್ರಿಕ ಗುಣ ಅಡಗಿದೆ. ಇದೆಲ್ಲದರ ನಡುವೆ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ RTI ಅರ್ಜಿ ಹಾಕಿ ಮಾಹಿತಿ ಕಲೆ ಹಾಕಿದ್ದಾರೆ.
ಹೌದು, ಪ್ರಧಾನಿ ಮೋದಿ ಅಧಿಕಾರ ಹಿಡಿದು 9 ವರ್ಷ ಆಯಿತು. ಇಷ್ಟು ಸುದೀರ್ಘ ಸಮಯದಲ್ಲಿ ಮೋದಿ ಎಷ್ಟು ರಜೆ ಹಾಕಿದ್ದಾರೆ. ಎಲ್ಲೆಲ್ಲಿ ರಜಾದ ಮಜಾ ಅನುಭವಿಸಿದ್ದಾರೆ ಎನ್ನುವ ಡಿಟೇಲ್ಸ್ ಚೆಕ್ ಮಾಡುವ ಕುತೂಹಲಕ್ಕೆ ಬಿದ್ದಿದ್ದಾರೆ. ಇವರಿಗೆ ಬಂದ ಉತ್ತರ ಕಂಡು ಅರ್ಜಿದಾರ ಶಾಕ್ ಆಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಾವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ 9 ವರ್ಷಗಳಲ್ಲಿ ಒಂದೂ ರಜೆ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ. ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿ ಗಾದಿಗೆ ಏರಿದ್ದರು. ಒಂದೂ ರಜೆ ಇಲ್ಲದೇ ಪ್ರಧಾನಿಯವರು ಕೆಲಸ ಮಾಡಿದ್ದಾರೆಂದು ಪಿಎಂಒ ಹೇಳಿದೆ. ಪ್ರಧಾನ ಮಂತ್ರಿ ಕಚೇರಿಗೆ ಪ್ರಫುಲ್ ಎಸ್. ಸರ್ದಾ ಎನ್ನುವರು ಮಾಹಿತಿ ಹಕ್ಕು ಅಧಿನಿಯಮದಡಿ (ಆರ್ಟಿಐ) ಮಾಹಿತಿ ಕೋರಿದ್ದರು.
ಅಲ್ಲದೇ ಪ್ರಧಾನಿಯವರು ತಾವು ಅಧಿಕಾರ ವಹಿಸಿಕೊಂಡ ನಂತರ ದೇಶ ವಿದೇಶಗಳಲ್ಲಿ 3000 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಜುಲೈ 31, 2023 ರಂದು ಸರ್ದಾ ಅವರು ಆರ್ಟಿಐ ಅರ್ಜಿ ಸಲ್ಲಿಸಿದ್ದರು. ಅವರು ಈ ಎರಡು ಮಾಹಿತಿಗಳನ್ನು ಕೇಳಿ ಅರ್ಜಿ ಸಲ್ಲಿಸಿದ್ದರು. ಈ ಆರ್ಟಿಐ ಅರ್ಜಿಯ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪ್ರಧಾನಿ ಮೋದಿ ಅವರು ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಾರೆ ಎಂಬುದನ್ನು ಪ್ರಶಂಶಿಸಿದ್ದಾರೆ.