ನ್ಯೂಸ್ ನಾಟೌಟ್ : ಸೋಮವಾರ (ಸೆ.4) ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಮಡಿಕೇರಿ-ಪಾಣತ್ತೂರು ಅಂತಾರಾಜ್ಯ ರಸ್ತೆಯ ಕರಿಕೆಯ ಎಳ್ಳುಕೊಚ್ಚಿ ಎಂಬಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಮರವೂಂದು ರಸ್ತೆಗೆ ಬಿದ್ದು ಕೆಲವು ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್ .ಬಾಲಚಂದ್ರನ್ ನಾಯರ್ ಅವರು, ಪಂಚಾಯತ್ ಸದಸ್ಯರು, ಗ್ರಾಮಸ್ಥರು ಸೇರಿ ಮರತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಭಾರಿ ಗಾಳಿ ಮಳೆಗೆ ಎಳ್ಳುಕೊಚ್ಚಿ ಎಂಬಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಮರಬಿದ್ದ ರಭಸಕ್ಕೆ ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಈ ಭಾಗದ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಬಳಿಕ ಅಧ್ಯಕ್ಷ ಬಾಲಚಂದ್ರನ್ ನಾಯರ್ ಮಂಗಳವಾರ ಬೆಳಗ್ಗೆ ಮೆಸ್ಕಾಂ ಸಿಬ್ಬಂದಿ ಸ್ಥಳೀಯರು ಸೇರಿ . ಮುರಿದ ವಿದ್ಯುತ್ಕಂಬಗಳಿಗೆ ಹೊಸ ಕಂಬ ಅಳವಡಿಸುವ ಪ್ರಕ್ರಿಯೆಮಾಡಿದರು.