ನ್ಯೂಸ್ ನಾಟೌಟ್ : ಮೂಕ ಪ್ರಾಣಿಗಳು ಕೆಲವೊಂದು ಸಲ ಅಪಾಯದಲ್ಲಿ ಸಿಲುಕಿದಾಗ ರಕ್ಷಣೆ ಮಾಡುವ ಮಂದಿ ಕೆಲವರಿದ್ದಾರೆ.ಇನ್ನೂ ಕೆಲವರಿಗೆ ಅದರ ಕೂಗು ಕೇಳಿಸದೇ ಇರಬಹುದು.ಆದರೆ ಇಲ್ಲೊಬ್ಬರು ವ್ಯಕ್ತಿ ವಿದ್ಯುತ್ ತಂತಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳವನ್ನೇ ಬದುಕಿಸಿ ಮಾನವೀಯತೇ ಮರೆದ ಘಟನೆ ವರದಿಯಾಗಿದೆ.
ಇಂದು ಬೆಳಗ್ಗೆ ಕಡಬ ಪೇಟೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಪಾರಿವಾಳವೊಂದರ ಕಾಲಿಗೆ ಪ್ಲಾಸ್ಟಿಕ್ ಹಗ್ಗವೊಂದು ತಗುಲಿ ನಂತರ ಆ ಪಾರಿವಾಳ ವಿದ್ಯುತ್ ತಂತಿಯಲ್ಲಿ ಸಿಲುಕಿತ್ತು.ತಕ್ಷಣ ಸ್ಥಳೀಯರು ಪಾರಿವಾಳದ ನೋವನ್ನು ಪವರ್ ಮ್ಯಾನ್ ಗಮನಕ್ಕೆ ತಂದರು.ತನ್ನ ಕೆಲಸವನ್ನ ಅರ್ಧದಲ್ಲೇ ಬಿಟ್ಟು ಒದ್ದಾಡುತ್ತಿದ್ದ ಪಾರಿವಾಳವನ್ನು ರಕ್ಷಿಸಲೆಂದು ಪವರ್ ಮ್ಯಾನ್ ಮುಂದಾಗಿದ್ದು,ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಇಂದು ನಡೆದ ಈ ಅಪರೂಪದ (ಸೆ.2ರ ಶನಿವಾರ ಬೆಳಗ್ಗೆ ) ಘಟನೆಗೆ ಇಡೀ ಕಡಬ ಪೇಟೆ ಸಾಕ್ಷಿಯಾಗಿದೆ. ಕಡಬ ಸಿಟಿ ಫೀಡರ್ ಪವರ್ಮ್ಯಾನ್ ಆಗಿರುವ ಪಿ.ಜೆ. ಗುರುಮೂರ್ತಿ ಎಂಬವರು ಪಾರಿವಾಳವನ್ನು ರಕ್ಷಣೆ ಮಾಡಿ ಮಾನವೀಯತೆ ತೋರಿಸಿದವರು. ಪಾರಿವಾಳಕ್ಕೆ ಯಾವುದೇ ರೀತಿಯ ಹಾನಿಯಾಗದೇ ಆರೋಗ್ಯ ಸ್ಥಿರವು ಚೆನ್ನಾಗಿತ್ತು ಎನ್ನಲಾಗಿದೆ.
ಪಾರಿವಾಳದ ಈ ಸ್ಥಿತಿಯನ್ನು ಕಂಡು ಕೂಡಲೇ ಕಾರ್ಯಪ್ರವೃತ್ತರಾದ ಪವರ್ ಮ್ಯಾನ್ ವಿದ್ಯುತ್ ಸಂಪರ್ಕ ಬಂದ್ ಮಾಡಿದ್ದರು. ಕಂಬವೇರಿ ಬಾಯಿಂದಲೇ ಕಚ್ಚಿ ಹಿಡಿದುಕೊಂಡು ಪಾರಿವಾಳವನ್ನು ರಕ್ಷಣೆ ಮಾಡಿದ್ದು ಆಶ್ಚರ್ಯವೆಂಬಂತಿದೆ.ಈ ಮೂಲಕ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆಗೂ ಪಾತ್ರರಾದರು. ಸ್ಥಳೀಯರಾದ ಗೋಪಾಲ್ ನಾಯಕ್ ಮೇಲಿನಮನೆ, ನಾಗೇಶ್ ಇತರರು ಸಹಕರಿಸಿದರು.