ನ್ಯೂಸ್ ನಾಟೌಟ್: ಇನ್ನೂ ಬದುಕಿ ಬಾಳಬೇಕಾಗಿದ್ದ ಪ್ರತಿಭಾವಂತ ಕಬಡ್ಡಿ ಆಟಗಾರ ಅಡಿಕೆ ಮರದಿಂದ ಬಿದ್ದು ಮೃತಪಟ್ಟಿದ್ದಾರೆ.
ಸುಳ್ಯದ ಉತ್ತಮ ಕಬಡ್ಡಿ ಆಟಗಾರ ಎಂದೇ ಖ್ಯಾತಿ ಪಡೆದಿದ್ದ ಉಮೇಶ್ ಅಲಿಯಾಸ್ ಕಾಶಿ (24 ವರ್ಷ) ಕಳೆದ ಎಂಟು ತಿಂಗಳ ಹಿಂದೆ ಕಾಣಿಯೂರಿನಲ್ಲಿ ಅಡಿಕೆ ಗಿಡಗಳಿಗೆ ಔಷಧಿ ಸಿಂಪಡಿಸುತ್ತಿರುವ ಸಂದರ್ಭ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೊಂಟಕ್ಕೆ ಬಲವಾಗಿ ಪೆಟ್ಟು ಬಿದ್ದುದರಿಂದ ಉಮೇಶ್ ಮಲಗಿದಲ್ಲೇ ಇದ್ದರು.
ಅಮರಮುಡ್ನೂರು ಗ್ರಾಮದ ಚಿಕ್ಕಿನಡ್ಕ ಕಾಲನಿ ನಿವಾಸಿ ಬಾಬು ಎಂಬವರ ಪುತ್ರ ಉಮೇಶ್ ಚಿಕ್ಕಿನಡ್ಕ ಸೊಂಟಕ್ಕೆ ಏಟಾಗಿ ಮಲಗಿದಲ್ಲೇ ಇದ್ದರು. ಇತ್ತೀಚೆಗೆ ಕಳೆದ ಒಂದು ವಾರದ ಹಿಂದೆ ಅನಾರೋಗ್ಯ ಉಲ್ಬಣಗೊಂಡಿದ್ದು ಅವರನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ತಾಯಿ ಕಳೆದ ನವೆಂಬರ್ ನಲ್ಲಿ ಅಸೌಖ್ಯ ಮೃತಪಟ್ಟಿರುತ್ತಾರೆ. ಮೃತರು ತಂದೆ ಬಾಬು ಸಹೋದರ ನಾಗೇಶ್ ಚಿಕ್ಕಿನಡ್ಕ ಮತ್ತು ಬಂಧುಗಳನ್ನು ಅಗಲಿದ್ದಾರೆ.