ನ್ಯೂಸ್ ನಾಟೌಟ್ : ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ(Spandana) ಅವರು ವಿಜಯ್ ರಾಘವೇಂದ್ರ ಅವರನ್ನು ಬಿಟ್ಟು ಹೋದ ಬಳಿಕ ಮತ್ತೆ ರಿಯಾಲಿಟಿ ಶೋಗೆ ಭಾಗಿಯಾಗಿದ್ದಾರೆ.ಕಳೆದೆರಡು ದಿನಗಳ ಹಿಂದೆ ವಿಜಯ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು.ಅದಾದ ಬಳಿಕ ಮಾಧ್ಯಮ ಸಂದರ್ಶನಗಳಿಗೂ ಭಾಗಿಯಾಗಿ ಮಾತನಾಡಿದ್ದರು.ಇದೀಗ ಪತ್ನಿ ಅಗಲಿಕೆಯ ನೋವಿನಲ್ಲೇ ಮತ್ತೆ ಕೆಲಸಗಳತ್ತ ಆ್ಯಕ್ಟೀವ್ ಆಗಿದ್ದಾರೆ.
ಸಿನಿಮಾ-ಕಿರುತೆರೆ ಎರಡರಲ್ಲೂ ವಿಜಯ್ ಆ್ಯಕ್ಟಿವ್ ಆಗಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು ” ಸ್ಪಂದನಾ ಕಂಡ ಕನಸನ್ನು ನಾನು ನನಸು ಮಾಡಬೇಕಾಗಿದೆ.ನಾನು ದುಖಃದಲ್ಲಿರೋದನ್ನು ಸ್ಪಂದನಾ ಸಹಿಸುತ್ತಿರಲಿಲ್ಲ.ಹೀಗಾಗಿ ಅವಳಿಗಾಗಿ ಅವಳ ಆಸೆಗಳನ್ನು ನಾನು ಪರಿಪೂರ್ಣಗೊಳಿಸಬೇಕು” ಎಂದಿದ್ದಾರೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7ಗೆ (Dance Karnataka Dance 7) ಮತ್ತೆ ಜಡ್ಜ್ (Judge) ಆಗಿ ಭಾಗವಹಿಸಿದ್ದಾರೆ. ಡಿಕೆಡಿಯಲ್ಲಿ ಶಿವರಾಜ್ಕುಮಾರ್(Shivarajkumar), ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಜೊತೆ ವಿಜಯ ಕೂಡ ಜಡ್ಜ್ ಆಗಿ ಗಮನ ಸೆಳೆದಿದ್ದರು.
ವಿಜಯ್ ಹಾಗೂ ಬೆಳ್ತಂಗಡಿಯ ಸ್ಪಂದನಾ ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಮದುವೆಯಾಗಿದ್ದರು. ಈ ಜೋಡಿಗೆ ಪುತ್ರ ಶೌರ್ಯ ಮಗನಿದ್ದು,ಮಗನ ಭವಿಷ್ಯದ ಮೇಲೆಯೂ ಅತೀವ ಕಾಳಜಿ ವಹಿಸಿದ್ದರು.ಸಾವಿರಾರು ಕನಸುಗಳನ್ನು ಕಂಡಿದ್ದರು. ಹೀಗೆ ಕಳೆದ ತಿಂಗಳು ಕುಟುಂಬದ ಆಪ್ತರ ಜೊತೆ ಥೈಲ್ಯಾಂಡ್ಗೆ ಹೋಗಿದ್ದಾಗ, ಹಾರ್ಟ್ ಅಟ್ಯಾಕ್ ಗೊಳಗಾಗಿದ್ದರು. ಸ್ಪಂದನಾ ಹಠಾತ್ ಅಗಲಿಕೆ ವಿಜಯ ಕುಟುಂಬಕ್ಕೆ ಶಾಕ್ ಕೊಟ್ಟಿದೆ.
ನ್ಯೂಸ್ ನಾಟೌಟ್ : ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ(Spandana) ಅವರು ವಿಜಯ್ ರಾಘವೇಂದ್ರ ಅವರನ್ನು ಬಿಟ್ಟು ಹೋದ ಬಳಿಕ ಮತ್ತೆ ರಿಯಾಲಿಟಿ ಶೋಗೆ ಭಾಗಿಯಾಗಿದ್ದಾರೆ.ಕಳೆದೆರಡು ದಿನಗಳ ಹಿಂದೆ ವಿಜಯ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು.ಅದಾದ ಬಳಿಕ ಮಾಧ್ಯಮ ಸಂದರ್ಶನಗಳಿಗೂ ಭಾಗಿಯಾಗಿ ಮಾತನಾಡಿದ್ದರು. ಪತ್ನಿ ಅಗಲಿಕೆಯ ನೋವಿನಲ್ಲೇ ಮತ್ತೆ ಕೆಲಸಗಳತ್ತ ಆ್ಯಕ್ಟೀವ್ ಆಗಿದ್ದಾರೆ.