ನ್ಯೂಸ್ ನಾಟೌಟ್: ರಸ್ತೆಗಿಳಿಯುವ ವಾಹನಗಳ ಹೊಗೆ ತಪಾಸಣೆಯನ್ನು ಕಾಲ ಕಾಲಕ್ಕೆ ಮಾಡಿಸಿಕೊಳ್ಳಬೇಕಿರುವುದು ವಾಹನ ಮಾಲೀಕರ ಕರ್ತವ್ಯ. ಹೊಗೆ ತಪಾಸಣೆಯನ್ನು ಸೂಕ್ತ ಸಮಯದಲ್ಲಿ ಮಾಡದಿದ್ದರೆ ಅಂಥಹವರಿಗೆ ಕಠಿಣ ಕಾನೂನಿನ ಶಿಕ್ಷೆಯೂ ಇದೆ. ಆದರೆ ಇಡೀ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಯಾವ ಕೇಂದ್ರದಲ್ಲೂ ಹೊಗೆ ತಪಾಸಣೆ ನಡೆಯುತ್ತಿಲ್ಲ. ಸಂಪೂರ್ಣವಾಗಿ ಹೊಗೆ ತಪಾಸಣೆ ಕೇಂದ್ರದ ಕೆಲಸಗಳು ಸ್ಥಗಿತಗೊಂಡಿದೆ.
ಹೌದು, ಇಡೀ ವಾಹನ ಸವಾರರು ಇದೀಗ ಸಂಪೂರ್ಣವಾಗಿ ಪರದಾಡುವಂತಾಗಿದೆ. ಸರ್ವರ್ ಡೌನ್ ಅನ್ನುವ ಉತ್ತರ ದೊರಕುತ್ತಿದೆ. ಆದರೆ ಯಾವ ಕಾರಣಕ್ಕೆ ಅನ್ನುವುದನ್ನು ಇನ್ನೂ ತಿಳಿಸಲಾಗಿಲ್ಲ.
ಸರ್ಕಾರದ ನಿರ್ಲಕ್ಷ್ಯದಿಂದ ಇಂತಹದೊಂದು ಅಚಾತುರ್ಯ ನಡೆದಿದೆ. ಇದರಿಂದ ಲಕ್ಷಾಂತರ ವಾಹನ ಸವಾರರಿಗೆ ತೊಂದರೆಯಾಗಿದೆ. ಮಾತ್ರವಲ್ಲ ಎಮಿಷನ್ ಟೆಸ್ಟ್ ಕೇಂದ್ರಗಳಲ್ಲಿ ಗ್ರಾಹಕರು ಬಂದು ಗಲಾಟೆಗಳನ್ನು ಮಾಡಿದ ಘಟನೆಗಳು ಕೂಡ ನಡೆದಿದೆ.
ಇದೆಲ್ಲ ಘಟನೆಗಳಿಂದ ರೋಸಿ ಹೋಗಿರುವ ಹೊಗೆ ತಪಾಸಣೆ ಕೇಂದ್ರದ ಮಾಲೀಕರು ಇದೀಗ ಸರ್ಕಾರದ ಜೊತೆಗೆ ಎರಡೆರಡು ಸುತ್ತು ಮಾತುಕತೆ ನಡೆಸಿದ್ದಾರೆ. ಆದರೆ ಯಾವ ಪ್ರಯೋನವೂ ಆಗಿಲ್ಲ. ಇದೇ ರೀತಿ ಮುಂದುವರಿದರೆ ನಾಳೆಯಿಂದ ಪ್ರತಿಭಟನೆ ನಡೆಸುವುದಕ್ಕೆ ಎಮಿಷನ್ ಟೆಸ್ಟ್ ಕೇಂದ್ರದ ಮಾಲೀಕರು ನಿರ್ಧರಿಸಿದ್ದಾರೆ.