ನ್ಯೂಸ್ ನಾಟೌಟ್ : ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸುವಾಗ ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಕಾಗುವುದಿಲ್ಲ. ಬಸ್ಸಿನಲ್ಲಿ ಕೂತಿರುವಾಗ ಮಕ್ಕಳು ತಲೆ ಹೊರಗೆ ಹಾಕಿದರೆ ಅಥವಾ ಕೈಗಳನ್ನು ಹೊರಹಾಕಿದರೆ ತಕ್ಷಣವೇ ಡ್ರೈವರ್ ಅಥವಾ ಕಂಡಕ್ಟರ್ ಮೊದಲು ತಲೆ ಒಳಗೆ ಹಾಕಿ ಎಂದು ಬೈಯ್ಯುವುದು ನೋಡಿರುತ್ತೇವೆ. ಆದರೆ, ಇಲ್ಲಿ ಪೋಷಕರೊಬ್ಬರ ಅಜಾಗರುಕತೆಯಿಂದಾಗಿ ಅಚಾತುರ್ಯ ನಡೆದುಹೋದ ಘಟನೆ ಹರಿಯಾಣದ ಅಲಿಪುರ ಪ್ರದೇಶದಲ್ಲಿ ಸಂಭವಿಸಿದೆ.
ಮಹಿಳೆಯೊಬ್ಬಳು ವಾಂತಿ ಬಂತೆಂದು ತಲೆ ಹೊರ ಹಾಕಿದಾಗ ಬಸ್ಸಿನ ಬಂದ ಮತ್ತೊಂದು ವಾಹನ ತಲೆಗೆ ಹೊಡೆದಿದ್ದು, ಎರಡು ವಾಹನಗಳ ನಡುವೆ ಮಹಿಳೆಯ ತಲೆ ಸಿಕ್ಕಿ ದುರಂತ ಸಂಭವಿಸಿದೆ.
ಹರಿಯಾಣದ ರೋಡ್ವೇಸ್ ಬಸ್ ನಲ್ಲಿ ಈ ದುರ್ಘಟನೆ ನಡೆದಿದೆ. ಉತ್ತರ ಪ್ರದೇಶದ ಪ್ರತಾಪ್ಗಢದಿಂದ ಬಂದಿದ್ದ ಬಾಬ್ಲಿ, ಕಾಶ್ಮೀರ್ ಗೇಟ್ನಿಂದ ಲುಧಿಯಾನಕ್ಕೆ ಬಸ್ ಏರಿದ್ದರು. ಇನ್ನೊಂದು ವಾಹನ ಬಸ್ಸನ್ನು ಹಿಂದಿಕ್ಕಲು ಯತ್ನಿಸಿದಾದ ಸಂದರ್ಭದಲ್ಲೇ ವಾಂತಿ ಬಂತೆಂದು ಮಹಿಳೆ ಕಿಟಕಿಯಿಂದ ತಲೆ ಹಾಕಿದ್ದರು. ಆ ಸಂದರ್ಭದಲ್ಲಿ ಆಕೆಯ ತಲೆ ಎರಡು ವಾಹನಗಳ ನಡುವೆ ಸಿಲುಕಿ ಘಟನೆ ನಡೆದಿದೆ.
ಆಕೆಯೊಂದಿಗೆ ಆಕೆಯ ಸಹೋದರಿ, ಆಕೆಯ ಪತಿ ಮತ್ತು ಅವರ ಮೂವರು ಮಕ್ಕಳು ಇದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಇನ್ನೊಂದು ವಾಹನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.