ನ್ಯೂಸ್ ನಾಟೌಟ್: ರಾಖಿ ಹಬ್ಬ (Raksha Bandhan 2023) ಅಣ್ಣ -ತಂಗಿಯರ ನಡುವಿನ ಪವಿತ್ರ ಸಂಬಂಧದ ಪ್ರತೀಕ. ತಂಗಿಯು ತನ್ನ ಅಣ್ಣನಿಗೆ ರಾಖಿ ಕಟ್ಟಿ ರಕ್ಷಣೆ ಕೇಳುತ್ತಾಳೆ. ಸಹೋದರ ರಕ್ಷಿಸುವ ಭರವಸೆ ನೀಡುತ್ತಾನೆ. ತಂಗಿಗೆ ಉಡುಗೊರೆ ನೀಡಿ ಜೊತೆಗೆ ನಾವಿದ್ದೇನೆ ಅನ್ನುವ ಮನೋಧೈರ್ಯ ತುಂಬುತ್ತಾನೆ. ಹಾಗಿದ್ದರೆ ರಾಖಿ ಹಬ್ಬದಂದು ಅಣ್ಣನು ತಂಗಿಗೆ ಯಾವ ಉಡುಗೊರೆ ನೀಡಬೇಕು..? ಯಾವ ಉಡುಗೊರೆ ನೀಡಬಾರದು. ಯಾವ ಉಡುಗೊರೆ ಕೊಟ್ಟರೆ ಸಂಬಂಧ ಹಾಳಾಗುತ್ತದೆ, ಇಂದು ನೀವು ಯಾವ ಗಿಫ್ಟ್ ನೀಡಿದರೆ ಒಳ್ಳೆಯದು.? ಅನ್ನುವುದರ ಬಗೆಗಿನ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ
ರಕ್ಷಾ ಬಂಧನದ ದಿನದಂದು ನೀವು ಕಪ್ಪು ಬಣ್ಣದ ಬಟ್ಟೆ ಅಥವಾ ವಸ್ತುವನ್ನು ತಂಗಿಗೆ ಉಡುಗೊರೆಯಾಗಿ ನೀಡಬಾರದು. ಹಿಂದೂ ಧರ್ಮದಲ್ಲಿ ಯಾವುದೇ ಶುಭ ಸಂದರ್ಭದಲ್ಲಿ ಕಪ್ಪು ಬಣ್ಣವನ್ನ ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಬಹಳಷ್ಟು ಹಿಂದಿನಿಂದ ನಡೆದುಕೊಂಡು ಬಂದಿದೆ. ಹಾಗಿದ್ದ ಮೇಲೆ ನಿಮ್ಮ ಸಹೋದರಿಯ ಭವಿಷ್ಯಕ್ಕಾಗಿ ನೀವು ಶುಭ ಹಾರೈಸುವುದಾಗಿದ್ದರೆ ರಕ್ಷಾ ಬಂಧನದ ದಿನದಂದು ನೀವು ಅವರಿಗೆ ಯಾವುದೇ ಕಪ್ಪು ಬಣ್ಣದ ಉಡುಗೊರೆಯನ್ನು ವಿಶೇಷವಾಗಿ ಬಟ್ಟೆಗಳನ್ನು ನೀಡುವುದನ್ನು ಆದಷ್ಟು ತಪ್ಪಿಸಬೇಕು.
ಮಹಿಳೆಯನ್ನು ಮನೆಯ ಲಕ್ಷ್ಮೀ ದೇವಿ ಎಂದು ಪೂಜಿಸಲಾಗುತ್ತದೆ. ರಾಖಿ ಹಬ್ಬದ ಸಂದರ್ಭದಲ್ಲಿ ಯಾವುದೇ ಪಾದರಕ್ಷೆಯನ್ನು ಉಡುಗೊರೆಯಾಗಿ ನೀಡುವ ಕೆಲಸ ಮಾಡಬಾರದು. ಇದು ಹಿಂದೂ ಧರ್ಮದಲ್ಲಿ ಅಪಮಾನವಾಗುತ್ತದೆ. ಇಂತಹ ಉಡುಗೊರೆ ನೀಡಿದ್ರೆ ಸಂಬಂಧಗಳ ನಡುವೆ ದೊಡ್ಡ ಕಂದಕ ಏರ್ಪಟ್ಟರೂ ಅಚ್ಚರಿ ಇಲ್ಲ.
ಗಡಿಯಾರ ಸಮಯಕ್ಕೆ ಸಂಬಂಧಿಸಿದೆ. ಅದನ್ನು ನೀವು ನಿಮ್ಮ ಸಹೋದರಿಗೆ ರಕ್ಷಾ ಬಂಧನದ ದಿನದಂದು ವಾಚ್ ಅಥವಾ ಗಡಿಯಾರವನ್ನು ಉಡುಗೊರೆಯಾಗಿ ನೀಡದಿರಿ. ಜೊತೆಗೆ ಕನ್ನಡಿಯನ್ನು ಕೂಡ ತಪ್ಪಿಯೂ ಉಡುಗೊರೆಯಾಗಿ ನೀಡಬೇಡಿ. ಕನ್ನಡಿಯನ್ನು ಉಡುಗೊರೆಯಾಗಿ ನೀಡಿದರೆ ಅದರಲ್ಲಿ ಅವರು ತಮ್ಮ ಮುಖವನ್ನು ನೋಡುತ್ತಾರೆ. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ನೀವು ಯಾರಿಗೆ ಕನ್ನಡಿಯನ್ನು ಉಡುಗೊರೆಯಾಗಿ ನೀಡುತ್ತಿರೋ ಅವರ ಮನಸ್ಸಿನಲ್ಲಿ ನಕರಾತ್ಮಕ ಭಾವನೆಗಳು ಬರಲು ಪ್ರಾರಂಭಿಸುತ್ತೇವೆ. ಇನ್ನು ಕರವಸ್ತ್ರವನ್ನು ಕೂಡ ನೀಡಬೇಡಿ. ವಾಸ್ತು ಪ್ರಕಾರ ಕರವಸ್ತ್ರ ಅಥವಾ ಸ್ಕಾರ್ಫ್ ಅನ್ನು ಉಡುಗೊರೆಯಾಗಿ ನೀಡಿದಾಗ ನೀವು ಅವರಿಂದ ಕಷ್ಟಗಳನ್ನು ಬಯಸಿ ಅವರ ಹೊರೆಯನ್ನು ಹೆಚ್ಚಿಸುತ್ತೀರಿ ಎಂಬುದಾಗಿದೆ. ಹೀಗಾಗಿ ರಕ್ಷಾ ಬಂಧನದ ದಿನದಂದು ಕರವಸ್ತ್ರವನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸಿ.