ನ್ಯೂಸ್ ನಾಟೌಟ್: ಇಂಡಿಯನ್ ಪ್ಲಾನೆಟರಿ ಸೈನ್ಸ್ ಅಸೋಸಿಯೇಷನ್ ವರ್ಕ್ ಶಾಪ್ ನಲ್ಲಿ ಪಾಲ್ಗೊಂಡು ಇಸ್ರೊ ಚಂದ್ರಯಾನ -೩ರ ಡೆಮೊ ಪ್ರಾಜೆಕ್ಟ್ ನಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿ ಭಾಗವಹಿಸಿದ್ದ ಸುಳ್ಯದ ಮಂಡೆಕೋಲಿನ ಮಾನಸ ಅವರನ್ನು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಸೋಮವಾರ ಗೌರವಿಸಿದರು.
ಈ ವೇಳೆ ಮಾತನಾಡಿದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ, ‘ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅಧ್ಯಯನ ನಡೆಸಬೇಕು. ಸಂಶೋಧನೆಯನ್ನು ಮಾಡಿದಾಗ ಹೊಸ ವಿಚಾರಗಳು ಬೆಳಕಿಗೆ ಬರುತ್ತದೆ. ಇದರಿಂದ ಮನುಕುಲಕ್ಕೆ ಒಂದಷ್ಟು ಒಳ್ಳೆಯ ಕೊಡುಗೆಗಳನ್ನು ನೀಡಿದಂತಾಗುತ್ತದೆ. ಭವಿಷ್ಯದಲ್ಲಿ ಮಾನಸ ವಿಜ್ಞಾನಿಯಾಗಿ ಬೆಳೆಯಲಿ. ದೇಶದ ಆಸ್ತಿಯಾಗಲಿ’ ಎಂದು ಶುಭ ಹಾರೈಸಿದರು.
ಒಕ್ಕಲಿಗ ಗೌಡ ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಒಕ್ಕಲಿಗ ಗೌಡ ಸೇವಾ ಸಂಘ ಮಂಗಳೂರು ನಿರ್ದೇಶಕ ರಕ್ಷಿತ್ ಪುತ್ತಿಲ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಮ್ಯಾನೇಜರ್ ಸುಬ್ಬ ಕಾರಡ್ಕ ಉಪಸ್ಥಿತರಿದ್ದರು.