ನ್ಯೂಸ್ ನಾಟೌಟ್ : ಸಮಯ ಹೇಗೆ ಇರುತ್ತೆ ಅನ್ನೋದನ್ನು ಊಹಿಸಿಕೊಳ್ಳೋದಕ್ಕು ಅಸಾಧ್ಯ.ಅದೃಷ್ಟ ಚೆನ್ನಾಗಿದ್ದರೆ ದೇವರು ಯಾವ ರೂಪದಲ್ಲಾದರೂ ಬಂದು ಕಾಪಾಡುತ್ತಾನೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಬೆಂಗಳೂರಿನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎರಡು ವರ್ಷದ ಬಾಲಕಿ ಇದ್ದು,ಆಕೆ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದಾಳೆ. ಆಮ್ಲಜನಕದ ಕೊರತೆಯಿಂದಾಗಿ ಆಕೆಯ ದೇಹವು ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದ್ದು, ಬಾಲಕಿಯ ಜೀವವು ಅಪಾಯದಲ್ಲಿರುವುದು ಕಂಡುಬಂದಿದೆ.ಕೂಡಲೇ ವಿಸ್ತಾರಾ ಏರ್ಲೈನ್ಸ್ ವಿಮಾನದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಣೆಯಾಗಿದೆ.
ಬಾಲಕಿಯ ಅದೃಷ್ಟವೋ ಏನೋ ಈ ವಿಮಾನದಲ್ಲಿ ಏಮ್ಸ್ನ ಐವರು ರೆಸಿಡೆನ್ಸಿ ವೈದ್ಯರು ಪ್ರಯಾಣಿಸುತ್ತಿದ್ದರು. ಕೂಡಲೇ ಘೋಷಣೆಯನ್ನು ಕೇಳಿದ ಅವರು ಹೆಣ್ಣು ಮಗುವಿನ ಜೀವ ಉಳಿಸಲು ಧಾವಿಸಿದ್ದಾರೆ. ವಿಮಾನದಲ್ಲಿಯೇ ಬಾಲಕಿಗೆ ಆಕ್ಸಿಜನ್ ಮತ್ತು ಲೈಫ್ ಸೇವಿಂಗ್ ಸರ್ವಿಸ್ ನೀಡಿದ್ದು,ಇದರಿಂದ ಬಾಲಕಿಯ ಸ್ಥಿತಿ ಸ್ಥಿರವಾಗಿದೆ. ಮಗುವಿನ ಜೀವ ಉಳಿಸಲು ತಮ್ಮೆಲ್ಲ ಪ್ರಯತ್ನ ಮಾಡುವ ಮೂಲಕ ಏಮ್ಸ್ ವೈದ್ಯರು ಬಾಲಕಿಯ ಪಾಲಿಗೆ ದೇವರಾಗಿದ್ದಾರೆ.
ಬಾಲಕಿಗೆ ಆಗಿದ್ದೇನು?
ಇದಾದ ಬಳಿಕ ಬಾಲಕಿಗೆ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಏಮ್ಸ್ ಟ್ವೀಟ್ ನಲ್ಲಿ ತಿಳಿಸಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಕೆ ಮೂರ್ಛೆ ಹೋದಳು. ವಿಮಾನದಲ್ಲಿದ್ದ ಏಮ್ಸ್ ವೈದ್ಯರು ತಪಾಸಣೆ ನಡೆಸಿದಾಗ ಬಾಲಕಿಯ ನಾಡಿಮಿಡಿತ ಕೆಲಸ ಮಾಡಲಿಲ್ಲ. ದೇಹ ತಣ್ಣಗಾಗಿದೆ. ಅವಳು ಉಸಿರಾಡಲು ಸಾಧ್ಯವಾಗಲಿಲ್ಲ. ತುಟಿಗಳು ಮತ್ತು ಬೆರಳುಗಳು ನೀಲಿ ಬಣ್ಣಕ್ಕೆ ತಿರುಗಿದವು. ಆ ನಂತರ ಏಮ್ಸ್ ವೈದ್ಯರು ಬಾಲಕಿಗೆ ಸಿಪಿಆರ್ ನೀಡಲು ಆರಂಭಿಸಿದರು. ಇದಲ್ಲದೆ, ಅವರಿಗೆ IV ಕ್ಯಾನುಲಾ ಮತ್ತು ಆಕ್ಸಿಜನ್ ಬೆಂಬಲವನ್ನು ನೀಡಲಾಯಿತು. ಅದರ ನಂತರ ರಕ್ತ ಪರಿಚಲನೆ ಸಾಮಾನ್ಯವಾಯಿತು. ಇದೇ ವೇಳೆ ಬಾಲಕಿಗೆ ಮತ್ತೊಮ್ಮೆ ಹೃದಯಾಘಾತವಾಗಿದೆ.
ಸದ್ಯ ಬಾಲಕಿಯ ಪ್ರಾಣವನ್ನು ವೈದ್ಯರು ಉಳಿಸಿದ್ದಾರೆ. ಬಾಲಕಿಗೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಸಪೋರ್ಟ್ ನೀಡಿದರು. ಇದರಿಂದ ಹೃದಯ ಬಡಿತವನ್ನು ನಿಯಂತ್ರಿಸಬಹುದು. ಇದಲ್ಲದೇ 45 ನಿಮಿಷಗಳ ಕಾಲ ಸಿಪಿಆರ್ ನೀಡಲಾಗಿದೆ. ಆ ನಂತರ ಬಾಲಕಿಯ ಸ್ಥಿತಿ ಸ್ಥಿರವಾಯಿತು. ವಿಮಾನವನ್ನು ನಾಗ್ಪುರದಲ್ಲಿ ಇಳಿಸಿದ ನಂತರ, ಬಾಲಕಿಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಡಾ.ನವದೀಪ್ ಕೌರ್, ಅರಿವಳಿಕೆ ವಿಭಾಗದ ಸೀನಿಯರ್ ರೆಸಿಡೆನ್ಸಿ ಡಾ.ಅವಿಚಲ, ಕಾರ್ಡಿಯಾಕ್ ರೇಡಿಯಾಲಜಿ ವಿಭಾಗದ ಡಾ.ದಮನ್ ದೀಪ್ ಸಿಂಗ್, ಸ್ತ್ರೀರೋಗ ವಿಭಾಗದ ಡಾ.ಓಶಿಕಾ ಮತ್ತು ರೇಡಿಯಾಲಜಿ ವಿಭಾಗದ ಎಕ್ಸ್ ಸೀನಿಯರ್ ರೆಸಿಡೆನ್ಸಿ ಡಾ.ರಿಷಭ್ ಜೈನ್ ವಿಮಾನದಲ್ಲಿದ್ದು, ಬಾಲಕಿಯ ಪ್ರಾಣ ಉಳಿಸಿದ್ದಾರೆ.