ನ್ಯೂಸ್ ನಾಟೌಟ್: 2014ರಲ್ಲಿ ಈತ ಶಾಲೆಗೆ ಬಂದು 2 ವರ್ಷವಷ್ಟೇ ಕರ್ತವ್ಯ ನಿರ್ವಹಿಸಿದ್ದ ಈ ಶಿಕ್ಷಕ ಬಳಿಕ, ಕಳೆದ 9 ವರ್ಷಗಳಿಂದ ಶಾಲೆಗೆ ಗೈರುಹಾಜರಾಗಿ ಸಂಬಳ ಪಡೆಯುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಮೋಸ ಬಯಲಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಕರ್ತವ್ಯಕ್ಕೆ ಬರದ ಶಿಕ್ಷಕನಿಗೆ ಶಿಕ್ಷಣ ಇಲಾಖೆಯು 9 ವರ್ಷಗಳಿಂದಲೂ ಸಂಬಳ ನೀಡುತ್ತಿತ್ತು ಎನ್ನಲಾಗಿದೆ.
ಕರ್ತವ್ಯಕ್ಕೆ ಹಾಜರಾಗದೇ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ಸಂಬಳ ಪಡೆಯುತ್ತಿದ್ದ ಕಾಡಪ್ಪ ಬೋಳ ಎಂಬಾತ ಶಿಕ್ಷಕರ ಈ ಮೋಸವನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು ಪತ್ತೆಹಚ್ಚಿದ್ದಾರೆ. ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದು, ತಪ್ಪಿತಸ್ಥ ಶಿಕ್ಷಕನಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಲಾಗಿದೆ.
ಶಿಕ್ಷಕ ಶಾಲೆಗೆ ಬರದೆ ಕಳ್ಳಾಟವಾಡಿದ್ರೂ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಸಂಬಳ ಪಡೆಯುತ್ತಿದ್ದ. 2014ರಲ್ಲಿ ಈತ ಶಾಲೆಗೆ ಬಂದು 2 ವರ್ಷವಷ್ಟೇ ಕರ್ತವ್ಯ ನಿರ್ವಹಿಸಿದ್ದ. ಬಳಿಕ ಈತ ಶಾಲೆಗೆ ಬರುತ್ತಿರಲಿಲ್ಲ, ಆದರೆ ತಿಂಗಳ ಕೊನೆಗೆ ಹಾಜರಾತಿ ಪುಸ್ತಕಕ್ಕೆ ನಿತ್ಯ ಸಹಿ ಹಾಕುತ್ತಿದ್ದ ಎಂಬುದು ಬಯಲಾಗಿದೆ.
ತನ್ನ ಬದಲು ಬೇರೋಬ್ಬ ಅತಿಥಿ ಶಿಕ್ಷಕನನ್ನು ನೇಮಿಸಿದ್ದ ಈ ಶಿಕ್ಷಕ ತನಿಗೆ 5 ಸಾವಿರ ರೂ. ಸಂಬಳ ನೀಡುತ್ತಿದ್ದ ಎನ್ನಲಾಗಿದೆ.