ನ್ಯೂಸ್ ನಾಟೌಟ್ : ಮಡಿಕೇರಿ ಸೈಂಟ್ ಮೈಕಲ್ ಪ್ರೌಢಶಾಲೆಯಲ್ಲಿ ನಡೆದ ವಲಯ ಮಟ್ಟದ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾಟದಲ್ಲಿ ಸಂಪಾಜೆ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪ ಕೆ. ತರಬೇತಿ ನೀಡಿದರು. ತಂಡದ ವ್ಯವಸ್ಥಾಪಕ ಕುಮಾರ್ ಎಚ್.ಜಿ. ಶಿಕ್ಷಕಿ ನಳಿನಿ ಎಂ., ವಿದ್ಯಾರ್ಥಿಗಳಾದ ದೀಕ್ಷಿತಾ, ಸಿಂಚನಾ, ದಿಶಾ, ಶ್ರಾವ್ಯ ಎಚ್.ಯು, ಶ್ರಾವ್ಯ ಕೆ.ಜಿ, ಹಿತಶ್ರೀ, ದೃತಿ, ದೀಕ್ಷಾ ವೈ.ಎಸ್, ದೀಕ್ಷಾ ಕೆ.ಯು, ಗ್ರೀಷ್ಮಾ ತಂಡದ ಜಯದ ಹಾದಿಗೆ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರ ಸಾಧನೆಗೆ ಶಾಲಾ ಮುಖ್ಯಶಿಕ್ಷಕರು ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕವೃಂದ ಅಭಿನಂದನೆ ಮಾಡಿದ್ದಾರೆ.
ತಾಲೂಕು ಮಟ್ಟದ ಕಾಲೇಜು ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲೂ ಸಂಪಾಜೆ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಫಾತಿಮತ್ ಐಫಾ. S H. ಹಿತಾಶ್ರೀ D.H. ಚರಿಷ್ಮಾ K N ಭವ್ಯಾಶ್ರೀ K G.ಚಸ್ಮಿತಾ K R ಇವಾಂಜಲಿನ್ ಡಿ ಸೋಜಾ ,ಹರ್ಷಾನ H ,ಖದೀಜತ್ ರಂಝೀನಾ ಇದ್ದರು. ತಂಡದ ವ್ಯವಸ್ಥಾಪಕ ಕೃಷ್ಣಪ್ರಸಾದ್ ಕೆ.ಕೆ. ಮಾರ್ಗದರ್ಶನ ನೀಡಿದ್ದರು. ಶಿಕ್ಷಕಿಯರಾದ ಸ್ವಾತಿ, ಶ್ರೀವಿದ್ಯಾ ಉಪಸ್ಥಿತರಿದ್ದರು.