ನ್ಯೂಸ್ ನಾಟೌಟ್: ಕೋಮು ವಿಚಾರಕ್ಕೆ ಸಂಬಂಧಿಸಿದಂತೆ ಸರ್ವ ಜನಾಂಗದ ಶಾಂತಿಯ ತೋಟವಾದ ಶಾಲೆಗಳಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸಗಳು ನಡೆಯುತ್ತಿರುತ್ತವೆ.
ಶಾಲಾ ಬೋರ್ಡ್ನಲ್ಲಿ ಜೈಶ್ರೀರಾಂ ಬರೆದ ವಿದ್ಯಾರ್ಥಿಯನ್ನು ಟೀಚರ್ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ತೀವ್ರ ಅಸ್ವಸ್ಥಗೊಂಡ ಬಾಲಕನ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮಾಹಿತಿ ತಿಳಿದ ಸ್ಥಳೀಯರು ಶಾಲೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಶಾಲಾ ಬೋರ್ಡ್ನ ಮೇಲ್ಬಾಗದಲ್ಲಿ ಜೈಶ್ರೀರಾಂ ಎಂದು ಬಾಲಕನೊಬ್ಬ ಬರೆದಿದ್ದಾನೆ. ಈ ಘಟನೆ ಟೀಚರ್ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕನ ಪತ್ತೆ ಹಚ್ಚಿದ ಟೀಚರ್, ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದಾನೆ. ಆದರೆ ಟೀಚರ್ ಮಾತ್ರ ಥಳಿಸುವುದು ನಿಲ್ಲಿಸಿಲ್ಲ. ಅಸ್ವಸ್ಥಗೊಂಡ ಬಾಲಕ ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ.
ಬಾಲಕ ಕುಸಿದು ಬೀಳುತ್ತಿದ್ದಂತೆ ಇತರ ವಿದ್ಯಾರ್ಥಿಗಳು ಚೀರಾಡಿದ್ದಾರೆ. ಇತ್ತ ಶಾಲಾ ಸಿಬ್ಬಂದಿಗಳು ಓಡೋಡಿ ಬಂದು ಬಾಲಕನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆ ಸಿಬ್ಬಂಧಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಬಾಲಕ ಆಸ್ಪತ್ರೆ ದಾಖಲಾಗಿರುವ ವಿಚಾರ ಪೋಷರಿಗೂ ತಿಳಿದಿದೆ. ಆಸ್ಪತ್ರೆಗೆ ಪೋಷಕರು ಓಡೋಡಿ ಬಂದಿದ್ದಾರೆ.
ಇತ್ತ ಬಾಲಕನ ತಂದೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಟೀಚರ್ ಹಾಗೂ ಪ್ರಿನ್ಸಿಪಾಲ್ ವಿರುದ್ಧ ದೂರು ದಾಖಲಾಗಿದೆ. ಇತ್ತ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಮೂವರು ತಂಡ ರಚಿಸಿದ್ದಾರೆ. ಜಿಲ್ಲಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮತ್ತೊಂದು ಸರ್ಕಾರಿ ಶಾಲೆಯ ಹಿರಿಯ ಪ್ರಿನ್ಸಿಪಾಲ್ ಅವರನ್ನೊಳಗೊಂಡ ಸಮಿತಿ ಘಟನೆ ಕುರಿತು ವಿಚಾರಣೆ ನಡೆಸಿ ವರದಿ ನೀಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದ ಘಟನೆಗೂ ಮೊದಲು ಉತ್ತರ ಪ್ರದೇಶದ ಮುಜಾಫರ್ ನಗರದ ಶಾಲೆಯಲ್ಲಿನ ಘಟನೆ ಬೆಳಕಿಗೆ ಬಂದಿತ್ತು. ಮುಸ್ಲಿಂ ವಿದ್ಯಾರ್ಥಿಗೆ ಇತರ ವಿದ್ಯಾರ್ಥಿಗಳಿಂದ ಕೆನ್ನಗೆ ಬಾರಿಸಲು ಸೂಚಿಸಿದ್ದ ಶಿಕ್ಷಕಿಯ ಸೂಚನೆಯಂತೆ ಇತರ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿ ಕೆನ್ನಗೆ ಭಾರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.