ನ್ಯೂಸ್ ನಾಟೌಟ್ : ಸೋಶಿಯಲ್ ಮಿಡಿಯಾ.. ಕೆಲವೊಮ್ಮೆ ಒಳ್ಳೆ ಸಂದೇಶಗಳಿಗಿಂತ ಕೆಟ್ಟ ಸಂದೇಶಗಳೇ ಹೆಚ್ಚು ಕಾಣಸಿಗುತ್ತವೆ.ಇದರಿಂದ ಸಮಾಜದ ಸ್ವಾಸ್ಥ್ಯ ಕೆಡುವುದಿದೆ. ಕೆಲವೊಬ್ಬರು ಕೂತಲ್ಲೇ ಕೂತು ಟ್ಯಾಪ್ ಮಾಡುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ವಿವಾದ ಸೃಷ್ಟಿ ಮಾಡುತ್ತಾರೆ..ಇನ್ಮುಂದೆ ಇದಕ್ಕೆಲ್ಲ ಕಡಿವಾಣ ಬೀಳಲಿದೆ.
ಹೌದು.. ಸೋಷಿಯಲ್ ಮೀಡಿಯಾದ ಮೇಲೆ ಈಗಾಗಲೇ ಹದ್ದಿನ ಕಣ್ಣಿಟ್ಟಿರೋ ಬೆಂಗಳೂರು ಸಿಟಿ ಪೊಲೀಸರು ಇನ್ಮುಂದೆ ಬೇಕಾ ಬಿಟ್ಟಿ ಪೋಸ್ಟ್ ಮಾಡಿ ವಿವಾದ ಸೃಷ್ಟಿ ಮಾಡೋರ ಮೇಲೆ ಹೆಚ್ಚು ಗಮನವಹಿಸ್ತಿದ್ದಾರೆ.
ಈ ಹಿಂದೆಯೇ ಸಾಕಷ್ಟು ಬಾರಿ ಪೊಲೀಸ್ರು ವಾರ್ನ್ ಮಾಡ್ತಾನೆ ಇದ್ರು. ಸೋಷಿಯಲ್ ಮೀಡಿಯಾ ಮೂಲಕ ವಿವಾದಗಳು ಹೇಗೆಲ್ಲಾ ಸದ್ದು ಮಾಡುತ್ವೆ ಅನ್ನೋದರ ಹೊಸತಾಗಿ ಹೇಳಬೇಕಾಗಿಲ್ಲ. ಅದು ಎಲ್ರಿಗೂ ಗೊತ್ತೇ ಇದೆ..
ಕಳೆದ ಎರಡ್ಮೂರು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿಭಾರಿ ಅಭಿಯಾನಗಳು, ಪೋಸ್ಟ್ ಗಳು, ವಿವಾದಗಳ ಚರ್ಚೆಗಳು ಅಬ್ಬಬ್ಹಾ ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆನೆ ವಾದ ಪ್ರತಿವಾದದ ಫೋಸ್ಟ್ ಹರಿದಾಡುತ್ತಲೇ ಇರುತ್ತದೆ. ಹೋರಾಟ ಅನ್ನೋ ಹೆಸ್ರಲ್ಲಿ ಟ್ವೀಟ್ ಅಥವಾ ಪೋಸ್ಟ್ ಮಾಡೋರು ಫಿಲ್ಡಿಗಿಳಿತಾರೋ ಇಲ್ವೋ ಆದ್ರೆ ಕೂತಲ್ಲೇ ಮೊಬೈಲ್ ನಲ್ಲಿ ಆ್ಯಶ್ ಟ್ಯಾಗ್ ಹಾಕಿ ದೊಡ್ಡ ವಿವಾದವನ್ನೇ ಸೃಷ್ಟಿ ಮಾಡ್ತಾರೆ.ಹೀಗಾಗಿ ಇದಕ್ಕೆ ಕಟ್ಟು ನಿಟ್ಟಿನ ಕ್ರಮಕ್ಕಾಗಿ ಪೊಲೀಸರು ನಿಗಾ ಇರಿಸಿದ್ದಾರೆ.
ಕೆಲವರ ಪೋಸ್ಟ್ ಗಳಂತೂ ಸ್ಟೇಷನ್, ಕೋರ್ಟ್ ಗೂ ಕರೆದೊಯ್ಯುವಂತೆ ಮಾಡುತ್ತವೆ. ಈ ರೀತಿ ಪ್ರಚೋದನೆ ನೀಡೋವಂತಹ ಪೋಸ್ಟ್ ಮಾಡೋರ ಮೇಲೆ ಪೊಲೀಸರು ಇನ್ಮುಂದೆ ಕಠಿಣ ಕ್ರಮ ಕೈಗೊಳ್ತಿದ್ದಾರೆ.. ಅದ್ಕೆ ಅಂತ್ಲೇ ಪೊಲೀಸ್ ಕಮಿಷನರ್ ಎಲ್ಲಾ ಸ್ಟೇಷನ್ ನಲ್ಲೂ ಟೀಂ ರೆಡಿ ಮಾಡ್ತಿದ್ದಾರೆ.ಧರ್ಮ, ಜಾತಿ, ದೇಶದ ಬಗ್ಗೆ ಟ್ವೀಟ್ ಮಾಡಿ ಪ್ರಚೋದನೆ ನೀಡೋವಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳೋಕೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲ ಅದಕ್ಕೆ ಅಂತ್ಲೇ ನಗರದ ಎಲ್ಲಾ ಸ್ಟೇಷನ್ಗಳಲ್ಲೂ ಇಬ್ಬರು ಸಿಬ್ಬಂದಿಯನ್ನ ಸೋಷಿಯಲ್ ಮೀಡಿಯಾ ನಿಗಾ ಇರಿಸೋದಕ್ಕಂತಲೇ ಜವಬ್ದಾರಿ ವಹಿಸಿದ್ದಾರೆ.. ಡಿಸಿಪಿ, ಎಸಿಪಿ ಲೆವಲ್ ಆಫೀಸ್ ನಲ್ಲೂ ಇಬ್ಬರು ಸಿಬ್ಬಂದಿ ಸೋಷಿಯಲ್ ಮೀಡಿಯಾ ಅಬ್ಸರ್ವ್ ಮಾಡ್ತಿದ್ದಾರೆ.. ಯಾರು ಫೇಕ್ ಅಕೌಂಟ್ ನಿಂದ ವಿವಾದ ಸೃಷ್ಟಿ ಮಾಡ್ತಾರೆ, ದೇಶ, ಧರ್ಮ, ಭಾವೈಕ್ಯತೆ, ವ್ಯಕ್ತಿಯ ಬಗ್ಗೆ ನಿಂದನೆ ಮಾಡೋದು, ಪ್ರಚೋದನಾಕಾರಿ ಪೋಸ್ಟ್ ಮಾಡೋದು ಮಾಡ್ತಾರೆ ಅಂತೋರನ್ನ ಮಾನಿಟರ್ ಮಾಡಿ ಕೇಸ್ ದಾಖಲಿಸಲಿದ್ದಾರೆ.ಒಟ್ಟಾರೆಯಾಗಿ ಪೊಲೀಸರು ಸೋಷಿಯಲ್ ಮೀಡಿಯಾದ ಮೇಲೆ ಹದ್ದಿನ ಕಣ್ಣಿಟ್ಟಿರೋ ಪೊಲೀಸರು ಬೇಕಾ ಬಿಟ್ಟಿ ವಿವಾದ ಸೃಷ್ಟಿ ಮಾಡೋರ ಹಿಂದೆ ಬಿದ್ದಿದ್ದಾರೆ.