ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ(Mangalore)ಲ್ಲಿ ವಿದೇಶಿ ಸಿಗರೇಟ್ ಮತ್ತು ಇ- ಸಿಗರೇಟ್ಗಳನ್ನು ಜಪ್ತಿ ಮಾಡಲಾಗಿದೆ.ಲಾಲ್ಬಾಗ್ ಬಳಿಯ ಕಾಂಪ್ಲೆಕ್ಸ್ ಅಂಗಡಿಗಳಿಗೆ ಬರ್ಕೆ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ 2.70 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್ ಮತ್ತು ಇ -ಸಿಗರೇಟ್ಗಳು (E-Cigarettes) ಪತ್ತೆಯಾಗಿದೆ. ಈ ಹಿನ್ನಲೆ ಮಂಗಳೂರಿನ ಮಣ್ಣಗುಡ್ಡೆಯ ಸ್ವಾತಿ(26), ಶಿವಕುಮಾರ್(34), ಕುತ್ತಾರು ಪದವಿನ ಹಸನ್ ಶರೀಫ್(50) ಹಾಗೂ ರೆಹಮತುಲ್ಲಾ(45) ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.