ನ್ಯೂಸ್ ನಾಟೌಟ್: ಕಂಠ ಪೂರ್ತಿ ಕುಡಿದ ಕೆಎಸ್ಆರ್ಟಿಸಿ ಚಾಲಕನೊಬ್ಬ (Ksrtc Driver) ಬಸ್ ಚಲಾಯಿಸಲು ಆಗದೆ ರಸ್ತೆ ಮಧ್ಯೆಯೇ ನಿಲ್ಲಿಸಿದ ಘಟನೆ ಎಚ್ಡಿ ಕೋಟೆಯಿಂದ ಮೈಸೂರಿಗೆ ಹೋಗುತ್ತಿದ್ದಾಗ ನಡೆದಿದೆ.
ಕರ್ತವ್ಯದಲ್ಲಿ ಇರುವಾಗಲೇ ಕಿಕ್ ಏರಿಸಿಕೊಂಡ ಡ್ರೈವರ್ಗೆ ಪ್ರಯಾಣಿಕರು ಹಿಡಿಶಾಪ ಹಾಕಿದರು. ಕೆಎಸ್ಆರ್ಟಿಸಿ ಬಸ್ ಚಾಲಕ ಗೋಪಾಲ ಕೃಷ್ಣನಿಗೆ ಪ್ರಯಾಣಿಕರು ತರಾಟೆ ತೆಗೆದುಕೊಂಡಿದ್ದಾರೆ.
ಕುಡುಕ ಚಾಲಕ ಗೋಪಾಲ ಕೃಷ್ಣ ಬಸ್ ಓಡಿಸಲು ಸಾಧ್ಯವಾಗದೆ ಅಡ್ಡಾದಿಡ್ಡಿ ಚಲಾಯಿಸಿದ್ದಾನೆ. ಕಂಠ ಪೂರ್ತಿ ಕುಡಿದಿದ್ದರಿಂದ ಬಸ್ ಚಲಾಯಿಸಲು ಸಾಧ್ಯವಾಗದೆ ಇದ್ದಾಗ ಹ್ಯಾಂಡ್ ಪೋಸ್ಟ್ ಬಳಿ ಬಸ್ ನಿಲ್ಲಿಸಿದ್ದಾನೆ ಎನ್ನಲಾಗಿದೆ.
ಇತ್ತ ಚಾಲಕನ ನಡವಳಿಕೆಯಿಂದ ಪ್ರಯಾಣಿಕರು ಕೂಡಲೇ ಗಾಬರಿಯಾಗಿ ಬಸ್ನಿಂದ ಒಬ್ಬರ ಹಿಂದೆ ಒಬ್ಬರು ಇಳಿದು ಬಿಟ್ಟಿದ್ದಾರೆ. ಈ ಬಸ್ನಲ್ಲಿ ಪ್ರಯಾಣಿಸಿದರೆ ನೇರ ಕೈಲಾಸಕ್ಕೆ ಕಳಿಸಿಬಿಡುತ್ತಾನೆ, ನಾವ್ಯಾರು ಈ ಬಸ್ನಲ್ಲಿ ಪ್ರಯಾಣಿಸುವುದಿಲ್ಲ ಎಂದು ಪ್ರಯಾಣಿಕರು ಹೇಳಿಕೊಂಡಿದ್ದು, ಕುಡಿದು ಟೈಟ್ ಆಗಿದ್ದ ಚಾಲಕನನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಡ್ರೈವರ್ ಗೋಪಾಲಕೃಷ್ಣ ನಾನು ಮುಂಜಾನೆ ಕುಡಿದಿದ್ದು, ಈಗ ಕುಡಿದಿಲ್ಲ. ನಾನು ಕೆಲಸಕ್ಕೆ ಬರಲ್ಲ ಎಂದಿದ್ದೆ ಆದರೂ ಬಂದಿದ್ದೇನೆ ಎಂದು ಸಾರ್ವಜನಿಕರಿಗೆ ಉತ್ತರಿಸಿದ್ದಾನೆ. ಇನ್ನು ಬಸ್ನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಮೈಸೂರಿಗೆ ಹೊರಟಿದ್ದರು. ಕುಡುಕ ಚಾಲಕನಿಂದ ಎಲ್ಲರೂ ಅರ್ಧ ದಾರಿಯಲ್ಲೇ ಇಳಿದಿದ್ದು, ಚಾಲಕನಿಗೆ ಬೈದು ಬೇರೆ ಬಸ್ ಹತ್ತಿದ್ದಾರೆ ಎಂದು ವರದಿ ತಿಳಿಸಿದೆ.