ನ್ಯೂಸ್ ನಾಟೌಟ್: ಕೊಡಗಿನ ವೀರ, ಭಾರತೀಯ ಸೈನ್ಯದ ಭೂ ಸೇನೆಯ ದಂಡನಾಯಕರಾಗಿದ್ದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತಕ್ಕೆ ಇಂದು (ಆ.21) ರಂದು ಬೆಳಗ್ಗೆ KSRTC ಬಸ್ ಗುದ್ದಿದೆ. ಪರಿಣಾಮ ವೃತ್ತ ಪುಡಿಪುಡಿಯಾಗಿದ್ದು ಜನರಲ್ ತಿಮ್ಮಯ್ಯ ಪ್ರತಿಮೆ ನೆಲಕ್ಕುರುಳಿ ಬಿದ್ದಿದೆ.
ಮಡಿಕೇರಿ ಡಿಪ್ಪೊದಿಂದ ಬಸ್ ಸ್ಟ್ಯಾಂಡ್ ಗೆ ಹೊರಟ್ಟಿದ್ದ ಬಸ್ ಗೆ ಎದುರಿಗೆ ಬರುತ್ತಿದ್ದ ಪಿಕಪ್ ವಾಹನ ಅಪಘಾತ ತಪ್ಪಿಸಲು ಹೋಗಿ ತಿಮ್ಮಯ್ಯ ಮೂರ್ತಿಗೆ ಗುದ್ದಿದೆ. ಘಟನೆಯಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಭಾರಿ ಹಾನಿಯಾಗಿದೆ. ಬಸ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಸ್ ಚಾಲಕ ಕೊಟ್ರೇಶ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ವಾತಂತ್ರ್ಯ ಭಾರತದ ಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರೂ ಕೊಡಗಿನವರೇ. ಅವರಂತೆಯೇ ಭಾರತದ ಭೂಸೇನೆಯ ದಂಡನಾಯಕರಾಗಿದ್ದ, ಅಪ್ಪಟ ಕನ್ನಡಿಗ ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರು ಅರ್ಥಾತ್ ಕೆ. ಎಸ್ ತಿಮ್ಮಯ್ಯನವರು 30 ಮಾರ್ಚ್ 1906ರಲ್ಲಿ ಕೊಡಗಿನ ಮಡಿಕೇರಿಯಲ್ಲಿ ಜನಿಸಿದರು.
ಆಗರ್ಭ ಶ್ರೀಮಂತ ಪ್ಲಾಂಟರ್ ಆಗಿದ್ದ ತಿಮ್ಮಯ್ಯ ಮತ್ತು ಸೀತವ್ವ ದಂಪತಿಗಳ ಪುತ್ರನಾಗಿ ಜನಿಸಿದರು. ಆದರೆ ಶಾಲೆಯಲ್ಲಿ ಅವರ ಪೂರ್ಣ ಹೆಸರು ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಎಂದಾದ್ದರಿಂದ ಸಣ್ಣದಾಗಿ ಕೆ ಎಸ್ ತಿಮ್ಮಯ್ಯ ಮಾಡಿದ್ದರಿಂದ ಆಪರೂಪಕ್ಕೆ ತಂದೆ ಮತ್ತು ಮಗ ತಿಮ್ಮಯ್ಯ ಎಂಬ ಒಂದೇ ಹೆಸರಿನಿಂದ ಪ್ರಸಿದ್ಧರಾದರು.
ತಿಮ್ಮಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೂನೂರು ಮತ್ತು ಬೆಂಗಳೂರಿನ ಬಿಶಪ್ ಕಾಟನ್ ಬಾಲಕರ ಶಾಲೆಯಲ್ಲಿ ಆರಂಭಿಸಿದರು. ಬಳಿಕ ಡೆಹ್ರಾಡೂನಿನ ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಇಂಡಿಯನ್ ಮಿಲಿಟ್ರಿ ಕಾಲೇಜ್ (ಈಗ ರಾಷ್ಟ್ರೀಯ ಇಂಡಿಯನ್ ಮಿಲಿಟ್ರಿ ಕಾಲೇಜ್)ನ್ನು ಸೇರಿದರು. ಭಾರತೀಯ ಸೇನೆಯ ಕಮಿಶನ್ ಹುದ್ದೆಗೆ ಸೇರಬೇಕಾಗಿದ್ದಲ್ಲಿ ಇಲ್ಲಿಯ ಪದವಿ ಪಡೆಯುವುದು ಅತ್ಯವಶ್ಯವಾಗಿತ್ತು. ಅಲ್ಲಿ ಪದವಿ ಪಡೆದ ಬಳಿಕ ಬ್ರಿಟನ್ನಿನ ರಾಯಲ್ ಮಿಲಿಟ್ರಿ ಅಕ್ಯಾಡೆಮಿ ಸ್ಯಾಂಡ್ಹರ್ಸ್ಟ್ಗೆ ತರಬೇತಿಗೆ ಆಯ್ಕೆಯಾದ ಆರು ಮಂದಿ ಭಾರತೀಯರಲ್ಲಿ ತಿಮ್ಮಯ್ಯನವರೂ ಒಬ್ಬರು ಅನ್ನುವುದು ವಿಶೇಷ.