ನ್ಯೂಸ್ ನಾಟೌಟ್: ನಟ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ರಾಜ್ಯದಲ್ಲಿ ಹೃದಯಾಘಾತ ಪ್ರಕರಣವನ್ನು ತಡೆಯಲು ‘ಪುನೀತ್ ರಾಜಕುಮಾರ್’ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಕರ್ನಾಟಕದಲ್ಲಿ ಹಾರ್ಟ್ ಅಟ್ಯಾಕ್ ಕೇಸ್ಗಳು ಹೆಚ್ಚಾಗುತ್ತಿವೆ. ಅದರಲ್ಲೂ ಚಿಕ್ಕ ವಯಸ್ಸಿನಲ್ಲಿ ಜನ ಸಾಯುತ್ತಿದ್ದಾರೆ. ಅದಕ್ಕೆ ಆರೋಗ್ಯ ಇಲಾಖೆ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು Automated External Defibrillators (AED) ಜಾರಿಗೆ ತರಲು ನಿರ್ಧರಿಸಿದೆ.
ಪುನೀತ್ ರಾಜ್ಕುಮಾರ್ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು Automated External Defibrillators (AED) ಗಳನ್ನು ಎಲ್ಲ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು.
Automated External Defibrillators ಎಲ್ಲಾ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ ಆರು ಕೋಟಿ ರೂಪಾಯಿ ಅನುದಾನ ಒದಗಿಸಲಾಗುವುದು ಎಂದು ಸಿಎಂ ಹೇಳಿದ್ದರು.
ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದ ಯೋಜನೆಯನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಯೋಜನೆಗೆ ಮೊದಲ ಹಂತವಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ಯೋಜನೆಗೆ ಮೊದಲ ಹಂತವಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜಯದೇವ ಆಸ್ಪತ್ರೆಯ ಅಡಿಯಲ್ಲಿ 45 ತಾಲೂಕು ಆಸ್ಪತ್ರೆಗಳನ್ನು ತರಲಾಗಿದೆ. ಈ ವ್ಯಾಪ್ತಿಯ 45 ಆಸ್ಪತ್ರೆಗಳಲ್ಲಿ ಏನಾದರೂ ಹೃದಯಾಘಾತವಾದರೇ ಅಥವಾ ಹೃದಯ ಸಂಬಂಧಿ ತುರ್ತು ಸಮಸ್ಯೆ ಕಂಡು ಬಂದರೇ ತಜ್ಞ ವೈದ್ಯರು ವಿಡಿಯೋ ಕಾನ್ಪರೇನ್ಸ್ ಮೂಲಕ ರೋಗಿಯನ್ನು ಉಳಿಸಲು ನೀಡಬೇಕಾದ ಪ್ರಾಥಮಿಕ ಚಿಕಿತ್ಸೆ ಬಗ್ಗೆ ಸ್ಥಳೀಯ ವೈದ್ಯರಿಗೆ ಸಲಹೆ ನೀಡುತ್ತಾರೆ.
ಹೃದಯಘಾತದಿಂದ ರೋಗಿ ಆಸ್ಪತ್ರೆಗೆ ದಾಖಲಾದ ನಂತರ ತಜ್ಞ ವೈದ್ಯರ ತಂಡ ಆ ರೋಗಿಯ ಹಿಸ್ಟರಿ ಪಡೆಯುತ್ತಾರೆ. ನಂತರ ಸ್ಥಳದಲ್ಲಿರುವ ವೈದ್ಯರು ತುರ್ತಾಗಿ ಹೇಗೆ ಚಿಕಿತ್ಸೆ ನೀಡಬೇಕು ? ಯಾವ ಇಂಜೆಕ್ಷನ್ ಕೊಡಬೇಕು ? ಯಾವೆಲ್ಲ ಪ್ರಾಥಮಿಕ ಚಿಕಿತ್ಸೆ ನೀಡಬೇಕು ಅಂತ ಸೂಚನೆ ನೀಡುತ್ತಾರೆ.
ಈ AED ಸ್ವಯಂಚಾಲಿತ ಎಲೆಕ್ಟ್ರಾನಿಕ್ ಸಾಧನವಾಗಿದೆ. ಹೃದಯಘಾತದ ಸಮಯದಲ್ಲಿ AED ಸಾಧನ ಮಾರಣಾಂತಿಕ ಹೃದಯಾಘಾತ ತೀವ್ರತೆ ಅಳೆಯುತ್ತದೆ.
ಹೃದಯಘಾತದ ತೀವ್ರತೆ ತಿಳಿದು ಸ್ವಯಂಚಾಲಿತವಾಗಿ ತುರ್ತು ಚಿಕಿತ್ಸೆ ನೀಡುತ್ತದೆ. ಹಾಗೆಯೇ ಸ್ವಯಂ ಚಾಲಿತವಾಗಿ ತುರ್ತು ಚಿಕಿತ್ಸೆ ನೀಡುತ್ತದೆ. ಕೆಲವು ಸಂದರ್ಭದಲ್ಲಿಈ ಎ ಇಡಿ ಯಂತ್ರ ಎಲೆಕ್ಟ್ರಿಕ್ ಶಾಕ್ ಡಿಫಿಬ್ರಿಲೇಷನ್ ನೀಡಲು ಸಹಾಯ ಮಾಡುತ್ತದೆ. ಪ್ರಾಥಮಿಕ ಚಿಕಿತ್ಸೆ ನಂತರ ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲು ಅನುಕೂಲವಾಗುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಈ ಯಂತ್ರ ಅಳವಡಿಕೆಯ ಮೂಲಕ ಹಠಾತ್ ಹೃದಯಾಘಾತ ರೋಗಿಗಳಿಗೆ ಸ್ಥಳದಲ್ಲೇ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಹೃದಯಾಘಾತ ರೋಗಿಗಳಿಗೆ ಗೋಲ್ಡನ್ ಟೈಮ್ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಇದರಿಂದ ಸಾಧ್ಯವಾಗುತ್ತದೆ. ಈ ಯಂತ್ರ ಅಳವಡಿಕೆಯ ಬಗ್ಗೆ ಇನ್ನೆರಡು ವಾರಗಳಲ್ಲಿ ಟೆಂಡರ್ ಕರೆಯಲಾಗುವುದು. ಬಜೆಟ್ನಲ್ಲಿ ಘೋಷಣೆಯಾದಂತೆ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.